ಲಾಕ್‌ಡೌನ್‌ಗೆ ಸಹಕರಿಸಿ

ಲಾಕ್‌ಡೌನ್‌ಗೆ ಸಹಕರಿಸಿ

ಕಾಗವಾಡ: ರಾಜ್ಯ ಸರ್ಕಾರದ ಆದೇಶದಂತೆ ಏ. 22ರಿಂದ 24ರ ಬೆಳಗ್ಗಿನವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಘೋಷಿಸಿದ್ದು, ಎಲ್ಲೆಡೆ ೧೪೪ ಕಲಂ ಘೋಷಿಸಿದ್ದು, ಸಾರ್ವಜನಿಕರು ಈ ಕಾಯಿದೆ ಭಂಗ ಮಾಡಬೇಡಿ. ದಯವಿಟ್ಟು ಕಾಗವಾಡ ಮತಕ್ಷೇತ್ರದ ಜನತೆ ಸಹಕರಿಸಬೇಕೆಂದು ಕ್ಷೇತ್ರ ಶಾಸಕ ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಆಹ್ವಾನಿಸಿದ್ದಾರೆ.
ಕ್ಷೇತ್ರದ ಜನತೆ ಬೇಕಾಬಿಟ್ಟಿ ರಸ್ತೆಗೆ ಇಳಿಯದೆ ಸಹಕರಿಸಿರಿ. ಪೊಲೀಸ್ ಇಲಾಖೆ ಕಾಯಿದೆ ಭಂಗಪಡಿಸುವರ ಮೇಲೆ ಕ್ರಮ ಜರುಗಿಸಲಿದ್ದಾರೆ. ದಯವಿಟ್ಟು ಸಹಕರಿಸಿರಿ. ಆಸ್ಪತ್ರೆ, ಔಷಧಿ ಅಂಗಡಿ, ಹಾಲು ಮಾರಾಟ ಇವುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳು ಸ್ಥಗಿತಗೊಳಿಸಲು ಕಾಗವಾಡ ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡಿದ್ದು, ಎಲ್ಲರು ಮನೆಯಲ್ಲೇ ಉಳಿದು ಕೊರೋನಾ ಮಹಾಮಾರಿ ಕಾಯಿಲೆ ಎದುರಿಸೋಣ ಎಂದು ಸಚಿವರು ಕರೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos