ಅಡುಗೆ ಅನಿಲ ವರದಾನವಾಗಿದೆ

ಅಡುಗೆ ಅನಿಲ ವರದಾನವಾಗಿದೆ

ದೇವನಹಳ್ಳಿ, ಆ. 31: ವಿಪರೀತ ಹೊಗೆಯಿಂದ ಮಹಿಳೆಯರಿಗೆ ದೃಷ್ಠಿ ದೋಷ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ, ಈಗ ಅಡುಗೆ ಅನಿಲ ವರದಾನವಾಗಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ತಿಳಿಸಿದರು.

ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ, ಸಿಲಿಂಡರ್ ಮತ್ತು ಸ್ಟೌವ್ ವಿತರಿಸಿ ಮಾತನಾಡಿದರು. ಪರಿಸರ ಸಂರಕ್ಷಣೆಗೆ ಮಾರಕವಾಗಿತ್ತು ಪ್ರಸ್ತುತ ಇದಕ್ಕೆ ಕಡಿವಾಣ ಬಿದ್ದಿದೆ. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಉರುವಲ ಮುಕ್ತ ಕುಟುಂಬಕ್ಕೆ ಸಹಕಾರಿ ಆಗಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಟ್ಟಿಗೆ, ಸಗಣಿ, ಇಜ್ಜಿಲು ಗಳಿಂದ ದಿನ ನಿತ್ಯದ ಆಹಾರ ತಯಾರಿಕೆಗಳನ್ನು ಮಾಡಲಾಗುತ್ತು. ಒಂದೇ ತಿಂಗಳಿನಲ್ಲಿ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿ ಯಲ್ಲಿ 96, ಬೊಮ್ಮವಾರ ಒಂದೇ ಗ್ರಾಮದಲ್ಲಿ ಇಲ್ಲಿವೆಗೆ 56 ಸಿಲಿಂರ‍್ಗಳನ್ನು ಅರ್ಹರಿಗೆ ವಿತರಿಸಲಾಗಿದೆ. ಪ್ರತಿ ರೈತರ ಖಾತೆಗೆ ಕೇಂದ್ರದ 6 ಸಾವಿರ ಪ್ರಾತ್ಸಾಹ ಧನದ ಮೊತ್ತ ಮೊದಲ ಕಂತಿನಲ್ಲಿ 2 ಸಾವಿರ ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದರು.

ಆವತಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್ ಮಾತನಾಡಿ ಹೊಗೆ ರಹಿತ ಕುಟುಂಬ ಮಾಡುವ ಉದ್ದೇಶದಿಂದ ಉಜ್ವಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಇದರಿಂದ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಿದೆ. ಪ್ರತಿ ಗ್ರಾಮದಲ್ಲೂ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ತಲುಪಬೇಕು. ಇಮತಹ ಯೋಜನೆಗಳ ಬಗ್ಗೆ ಜನರಿಗೆ ತಿಳಿ ಹೇಳಬೇಕು ಎಂದು ಹೇಳಿದರು.

ಈ ವೇಳೇಯಲ್ಲಿ ಬಿಜೆಪಿಯ ಪದಾಧಿಕಾರಿಗಳಾದ ಕೆ. ರಾಮಾಂಜನಪ್ಪ, ಬಿ ಸಿ ಆನಂದ್ ಕುಮಾರ್, ಬಿಸಿ ಸೋಮಶೇಖರ್, ಬಿ ರಾಜಣ್ಣ, ಹೇಮಂತ್ ಗೌಡ, ಸಂಗಮೇಶ್, ಗೋಪಿ ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos