ಖೈದಿ ಹೊಟ್ಟೆಯಲ್ಲಿ 3 ಫೋನ್, ಚಾರ್ಜರ್, ಸಿಮ್ ಕಾರ್ಡ್, 10 ಸಿಗರೇಟ್ ಪ್ಯಾಕ್

ಖೈದಿ ಹೊಟ್ಟೆಯಲ್ಲಿ 3 ಫೋನ್, ಚಾರ್ಜರ್, ಸಿಮ್ ಕಾರ್ಡ್, 10 ಸಿಗರೇಟ್ ಪ್ಯಾಕ್

ನವದೆಹಲಿ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಜಾಮೀನಿನ ಮೇಲೆ ಹೊರ ಹೋಗಿದ್ದ ಕೈದಿ 15 ದಿನಗಳ ನಂತ್ರ ಜೈಲಿಗೆ ವಾಪಸ್ ಬಂದಿದ್ದಾನೆ. ಈ ವೇಳೆ ಕೈದಿ ಹೊಟ್ಟೆಯಲ್ಲಿ 3 ಮೊಬೈಲ್ ಫೋನ್, ಒಂದು ಚಾರ್ಜರ್, ಎರಡು ಸಿಮ್ ಕಾರ್ಡ್ ಹಾಗೂ 10 ಪ್ಯಾಕ್ ಸಿಗರೇಟ್ ಸಿಕ್ಕಿದೆ. ವರದಿ ಪ್ರಕಾರ, 24 ವರ್ಷದ ವಿಚಾರಣಾಧೀನ ಕೈದಿ ಅಖ್ತರ್ ಅಲಿಯಾಸ್ ಜಾನ್, ಮಂಡೋಲಿ ಜೈಲಿನಲ್ಲಿದ್ದಾನೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಅಖ್ತರ್ ನನ್ನು ಬಂಧಿಸಲಾಗಿದೆ. ಮಾರ್ಚ್ 23ರಂದು ಅಖ್ತರ್ ಗೆ ಜಾಮೀನು ಸಿಕ್ಕಿತ್ತು. 15 ದಿನಗಳ ಕಾಲ ಜಾಮೀನಿನ ಮೇಲೆ ಹೊರಗೆ ಹೋಗಿದ್ದ ಅಖ್ತರ್, ಏಪ್ರಿಲ್ 6ರಂದು ವಾಪಸ್ ಬಂದಿದ್ದ. ಮೆಟಲ್ ಡಿಟೆಕ್ಟರ್ ಮೂಲಕ ಒಳಗೆ ಬರ್ತಿದ್ದಂತೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಎಕ್ಸ್ ರೇ ವೇಳೆ ಹೊಟ್ಟೆಯಲ್ಲಿ ಮೂರು ಫೋನ್, ಚಾರ್ಜರ್, ಸಿಮ್, ಸಿಗರೇಟ್ ಕಾಣಿಸಿದೆ. ನಂತ್ರ ಎಂಡೋಸ್ಕೊಪಿ ನಡೆಸಿ ಎಲ್ಲ ವಸ್ತುವನ್ನು ಹೊರಗೆ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos