ಸಂವಿಧಾನ ಸಮರ್ಪಣಾ ದಿನಾಚರಣೆ

ಸಂವಿಧಾನ ಸಮರ್ಪಣಾ ದಿನಾಚರಣೆ

ಕೋಲಾರ: ಕರ್ನಾಟಕ ರಾಜ್ಯ ಪ್ರಗತಿ ಪರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಕೋಲಾರ ನಗರದ ನಚಿಕೇಯ ನಿಲಯ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡುವ ಮುಖಾಂತರ ರಾಜ್ಯಾಧ್ಯಕ್ಷರಾದ ವಕೀಲ ಜಿ.ವೆಂಕಟಾಚಲಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತರಲ್ಲ, ಶೋಷಣೆಗೆ ಒಳಪಟ್ಟ ಎಲ್ಲಾ ವರ್ಗಗಳಿಗೂ ಮತ್ತು ಅವರಿಗಾಗಿ ಹೋರಾಟ ಮಾಡಿದಂತವರು. ಆದುದರಿಂದ ಬಾಬಾ ಸಾಹೇಬರನ್ನು ಎಲ್ಲಾ ವರ್ಗದವರಿಗೂ ಬೇಕಾದವರು. ಆದುದರಿಂದಲೇ ಭಾರತದ ಸಂವಿಧಾನದ ಅಡಿಯಲ್ಲಿ ರಾಜಕೀಯ ಆರ್ಥಿಕತೆ ಸಾಮಾಜಿಕತೆ ಸಮಾನತೆ ಸಂಬಂಧಿಸಿದಂತೆ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯತೆ ಸಿಕ್ಕಿದೆ. ಆದ್ದರಿಂದ ಅಂಬೇಡ್ಕರ್ ಬರೆದ ಸಂವಿಧಾನವನ್ನು ಎಲ್ಲರೂ ಓದಬೇಕಾಗಿದೆ ಎಂದರು.
ಸಾಹಿತಿ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ, ಇಡೀ ದೇಶದ ದಾರದೀಪವಾದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಅಸಮಾನತೆಯನ್ನು ಹೋಗಲಾಡಿಸಿ ವಿಶ್ವಮಾನವ ಸಂದೇಶವನ್ನು ಇಡೀ ಸಂವಿಧಾನ ಒಳಗೊಂಡಿರುವುದು ಎಲ್ಲರೂ ಅರ್ಥೈಸಲೇಬೇಕಾದ ವಿಷಯ.
ಶೋಷಣೆ ಮತ್ತು ದಾಸ್ಯತ್ವಗಳ ಮೂಲಕ ದಲಿತರನ್ನು ಸ್ವಾಭಿಮಾನ ಶಿಕ್ಷಣ ಸಂಘಟನೆಗಳನ್ನು ಒಳಗೊಂಡಂತೆ ಅವರನ್ನು ಆರ್ಥಿಕ ಸಾಮಾಜಿಕ ರಾಜಕೀಯ ಸಮಾನತೆಯನ್ನು ಕಂಡುಕೊಳ್ಳುವಂತೆ ಮಾಡಿದವರು ಅಂಬೇಡ್ಕರ್ ಅವರು ಎಂದರು.
ಕಾರ್ಯಕ್ರಮದಲ್ಲಿ ರಾಜಕುಮಾರ, ಯುವರಾಜ, ಮಾಸ್ತಿ ಮುನಿರಾಜ, ಲಕ್ಷ್ಮೀ ದೇವಮ್ಮ, ರಾಧಮ್ಮ ಮುಂತಾದವರು ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos