ಡಿಕೆಶಿ, ಪರಂ ಆಯ್ತು ಈಗ ಜಾರ್ಜ್ ಸರದಿ..?

ಡಿಕೆಶಿ, ಪರಂ ಆಯ್ತು ಈಗ ಜಾರ್ಜ್  ಸರದಿ..?

ಬೆಂಗಳೂರು,ಅ. 20 : ಕಾಂಗ್ರೆಸ್ನ  ಘಟಾನುಘಟಿಗಳ ಟೈಮೇ ಸರಿ ಇಲ್ಲ ಅನ್ಸತ್ತೆ. ಇಡಿ, ಐಟಿ ದಾಳಿಯಿಂದ ಡಿ.ಕೆ ಶಿವಕುಮಾರ್, ಕೊರಟಗೆರೆ ಪರಮೇಶ್ವರ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದೀಗ ಕೆ.ಜೆ ಜಾರ್ಜ್ಗೆ ಬಿಸಿ ಮುಟ್ಟಿಸಲು ಇಡಿ ರೆಡಿಯಾದಂತಿದೆ. ಕಾಂಗ್ರೆಸ್ನ ಘಟಾನುಘಟಿ ನಾಯಕರೇ ಇಡಿಯ ಟಾರ್ಗೆಟ್ ಆಗಿರೋದು ವಿಶೇಷ. ಚಿದಂಬರಂ, ಡಿಕೆ ಶಿವಕುಮಾರ್ ಈಗಾಗ್ಲೇ ಇಡಿ ಬೇಡಿಗೆ ಕೈಕೊಟ್ಟು ತಿಹಾರ್ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಜಿ ಪರಮೇಶ್ವರ್ ಕೂಡ ಐಟಿ ಅಧಿಕಾರಿಗಳ ಬಲೆಗೆ ಬಿದ್ದು ಚಡಪಡಿಸಿ ಐಟಿ-ಮನೆ ಅಂತ ಅಲೆದಾಡೋಕೆ ಶುರುಮಾಡಿದ್ದಾರೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕೆ.ಜೆ ಜಾರ್ಜ್ರನ್ನ ಇಡಿ ಬಲೆಗೆ ಕೆಡವೋಕೆ ಸಿದ್ದವಾದಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos