ಲೋಕಸಮರ: ಕಾಂಗ್ರೆಸ್ ನಿಂದ ಜಿಲ್ಲಾವಾರು ನಾಯಕರ ಸಭೆ!

ಲೋಕಸಮರ: ಕಾಂಗ್ರೆಸ್ ನಿಂದ ಜಿಲ್ಲಾವಾರು ನಾಯಕರ ಸಭೆ!

ಬೆಂಗಳೂರು : ಲೋಕಸಭೆ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಇಂದು ಜಿಲ್ಲಾವಾರು ಸಭೆ ಆರಂಭಿಸಿದೆ.

ಲೋಕಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡುವ ಕುರಿತು ಸಂಕಲ್ಪ ಮಾಡಲಾಗಿದೆ. ಇದೀಗ ಈ ಕಾರ್ಯಕ್ಕೆ ಯಾವುದೇ ವಿಘ್ನ ಎದುರಾಗದೇ ಇದ್ದರೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆದರೆ ಅದಕ್ಕೆ ಬದ್ಧವಾಗಿ ನಡೆದುಕೊಳ್ಳಲಾಗುವುದು. ಇಲ್ಲವೇ ಮಾತು ಬಿದ್ದರೆ ಇರುವ ಕಡಿಮೆ ಅವಧಿಯಲ್ಲಿ ಪಕ್ಷದಿಂದ ಗೆಲ್ಲುವ ಅಭ್ಯರ್ಥಿಯನ್ನು ಒಮ್ಮತದಿಂದ ಒಪ್ಪಿಕೊಂಡು ಪಕ್ಷಕ್ಕೆ ಸೂಚಿಸುವುದು ಎಂಬ ಸಂದೇಶವನ್ನು ರವಾನಿಸುತ್ತಿದೆ ಎನ್ನಲಾಗಿದೆ.

ಇನ್ನು ಸಭೆಯಲ್ಲಿ ಕಾಂಗ್ರೆಸ್ ನಾಯಕರು, ಹಾಲಿ ಹಾಗೂ ಮಾಜಿ ಸಂಸದರು, ಸಚಿವರು, ಶಾಸಕರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಲೋಚಿಸುತ್ತಿದ್ದಾರೆ. ಮೈತ್ರಿ ಏರ್ಪಟ್ಟರೆ ಪಕ್ಷದ ಬದ್ಧತೆ ಪ್ರದರ್ಶಿಸುವುದು. ಮುರಿದು ಬಿದ್ದರೆ ಏಕತೆಯನ್ನು ಪ್ರದರ್ಶಿಸುವುದರ ಕುರಿತು ಅವರು ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos