ಕಾಂಗ್ರೆಸ್‍ ಸಂದೇಶಗಳನ್ನು ಮನೆ-ಮನಗಳಿಗೆ ತಲುಪಿಸುತ್ತೇನೆ: ಹೆ.ಚ್‍.ಕೆ.ಪಾಟೀಲ್

ಕಾಂಗ್ರೆಸ್‍ ಸಂದೇಶಗಳನ್ನು ಮನೆ-ಮನಗಳಿಗೆ ತಲುಪಿಸುತ್ತೇನೆ: ಹೆ.ಚ್‍.ಕೆ.ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನ್ನು ಗಟ್ಟಿಗೊಳಿಸಿ ಎಲ್ಲರ ಮನೆ ಮನಗಳಿಗೆ ಕಾಂಗ್ರೆಸ್ ಸಂದೇಶವನ್ನು ತಲುಪಿಸುವ ಮೂಲಕ ಪಕ್ಷವನ್ನು ಹಳೆಯ ವೈಭವಕ್ಕೆ ತರಲು ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ನೂತನ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನಗಳಿಂದ ದೇಶ ಸದೃಢವಾಗಿದೆ ಎಂದರು.

ಕಾಂಗ್ರೆಸ್ 60 ವರ್ಷಗಳಲ್ಲಿ ಏನು ಮಾಡಿದೆ ಎಂದು ಕೆಲವರು ಕೇಳುತ್ತಿದ್ದಾರೆ. ಈ ರೀತಿ ಕೇಳುವುದು. ಅಜ್ಞಾನದ ಪರಮಾವಧಿ. ಕಾಂಗ್ರೆಸ್ ನ್ನು ಮುಕ್ತಗೊಳಿಸಲು ಹೊರಟಿರುವವರೆ ಮುಂದೆ ಮುಕ್ತರಾಗುತ್ತಾರೆ ಎಂದು ಪರೋಕ್ಷವಾಗಿ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ನ ಆಳ್ವಿಕೆಯಲ್ಲೆ ದೇಶ ಪ್ರಗತಿ ಕಂಡಿದೆ. ಕಾಂಗ್ರೆಸ್‌ನ್ನು ಪ್ರಶ್ನಿಸುವ ಬಿಜೆಪಿಯವರು ಮಾಡಿದ್ದೇನು? ಯುವಕರಿಗೆ ಉದ್ಯೋಗ ನೀಡಲಿಲ್ಲ. ಬಿಜೆಪಿಯ ಕೆಟ್ಟ ಆಡಳಿತದಿಂದ ಉದ್ಯೋಗ ಸೃಷ್ಠಿ ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ರಾಷ್ಟ್ರ ಇಂದು ಕಠಿಣ ಪರಿಸ್ಥಿತಿಯಲ್ಲಿ ಇದೆ. ದೇಶದ ಹಲವಾರು ವಿಚಾರಗಳನ್ನು ಬಿಜೆಪಿ ಪ್ರಚಾರ ವಸ್ತುವನ್ನಾಗಿ ಮಾಡಿಕೊಂಡಿದೆ. ಸರ್ಜಿಕಲ್ ಸ್ಟ್ರೈಕ್‌ನ್ನು ದೊಡ್ಡದಾಗಿ ಬಿಂಬಿಸಿತು. ಆದರೆ ಕಾಂಗ್ರೆಸ್ ಅದಕ್ಕಿಂತ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಿದೆ. ಹಲವು ಯುದ್ಧಗಳನ್ನು ಗೆದ್ದಿದೆ ಎಂದರು.

ಬಿಜೆಪಿಯ ಕೆಟ್ಟ ಆಡಳಿತದಿಂದ ಉದ್ಯೋಗ ಸೃಷ್ಠಿ ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ರಾಷ್ಟ್ರ ಇಂದು ಕಠಿಣ ಪರಿಸ್ಥಿತಿಯಲ್ಲಿ ಇದೆ. ದೇಶದ ಹಲವಾರು ವಿಚಾರಗಳನ್ನು ಬಿಜೆಪಿ ಪ್ರಚಾರ ವಸ್ತುವನ್ನಾಗಿ ಮಾಡಿಕೊಂಡಿದೆ. ಸರ್ಜಿಕಲ್ ಸ್ಟ್ರೈಕ್‌ನ್ನು ದೊಡ್ಡದಾಗಿ ಬಿಂಬಿಸಿತು. ಆದರೆ ಕಾಂಗ್ರೆಸ್ ಅದಕ್ಕಿಂತ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಿದೆ. ಹಲವು ಯುದ್ಧಗಳನ್ನು ಗೆದ್ದಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos