ಇಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ

ಇಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ

ಹೊಸಕೋಟೆ, ನ. 16: ರಾಜ್ಯದಲ್ಲೆ ಅತಿ ಹೆಚ್ಚು ಗಮನ ಸೆಳೆದಿರುವ ಹೊಸಕೋಟೆ ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ. ಇವತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಾಪತ್ರ ಸಲ್ಲಿಸಿದ್ದು, ಚುನಾವಣಾ ಕಾವು ಮತ್ತಷ್ಟು ಜಾಸ್ತಿಯಾಗಿದೆ.

ಇಡೀ ರಾಜ್ಯದ ಗಮನ ಸೆಳೆದಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ. ಕಾಂಗ್ರೇಸ್ ಪರ ಅಭ್ಯರ್ಥಿಯಾಗಿ ಇಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಸಿದ್ರು. ಬೆಳಗ್ಗೆ ಭೈರತಿಯ ಮನೆಯಿಂದ ಹೊರಟ ಸುರೇಶ್ ಹಾಗೂ ಪದ್ಮಾವತಿ ದಂಪತಿ ತಾವರೆಕೆರೆಯ ತಮ್ಮ ಮನೆದೈವ ರಾಮೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ಹೊಸಕೋಟೆಯ ಅವಿಮುಕ್ತೇಶ್ವರ ಹಾಗೂ ದರ್ಗಾಗಳಿಗೆ ಪೂಜೆ ಸಲ್ಲಿಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ರು.

ಇನ್ನೂ  ನಾಮಪತ್ರ ಸಲ್ಲಿಕೆ ವೇಳೆ ಪದ್ಮಾವತಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ ಸಾಥ್ ನೀಡಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಈ ಹಿಂದೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೇಸ್ ನಿಂದ ಗೆದ್ದು ಈಗ ಬಿಜೆಪಿ ಸೇರಿರುವ ಎಂ ಟಿ ಬಿ ನಾಗರಾಜು ವಿರುದ್ದ ಹರಿಹಾಯ್ದರು. ಎಂಟಿಬಿ ನಾಲಾಯಕ್ ವ್ಯಕ್ತಿ ಅವರನ್ನ ಸುಪ್ರೀಂ ಕೋರ್ಟೇ ಅನರ್ಹ ಮಾಡಿದೆ. ಅಂತಹ ವ್ಯಕ್ತಿಯನ್ನು ಸೋಲಿಸುವ ಮೂಲಕ ಜನತೆ ಅವರನ್ನು ಈಗ ಅನರ್ಹ ಮಾಡಬೇಕು ಎಂದ್ರು. ಅಲ್ಲದೆ ಅವರು ಎರಡನೇ ಸ್ಥಾನವನ್ನೂ ಈ ಬಾರಿ ಪಡೆಯುವುದಿಲ್ಲ ಎಂದು ಎಂಟಿಬಿಯನ್ನು ಟೀಕಿಸಿದ್ರು

 

ಫ್ರೆಶ್ ನ್ಯೂಸ್

Latest Posts

Featured Videos