‘JDS ಪಕ್ಷ’ದ ಇಬ್ಬರು ಅಭ್ಯರ್ಥಿಗಳು ‘ಕಾಂಗ್ರೆಸ್’ ಗೆ ಸೇರ್ಪಡೆ

‘JDS ಪಕ್ಷ’ದ ಇಬ್ಬರು ಅಭ್ಯರ್ಥಿಗಳು ‘ಕಾಂಗ್ರೆಸ್’ ಗೆ ಸೇರ್ಪಡೆ

ಬೆಂಗಳೂರು: ಒಂದ್ಕಡೆ ದಳ-ಕಮಲ ದೋಸ್ತಿಗೆ ಒಳಗೊಳಗೆ ವಿರೋಧ ವ್ಯಕ್ತವಾಗ್ತಿದ್ರೆ ಇದೀಗ ಜೆಡಿಎಸ್​ಗೆ ಹೊಸ ಶಾಕ್ ಎದುರಾಗಿದೆ. ಇಂದು ಜೆಡಿಎಸ್​ ನಾಯಕರು ತೆನೆ ಇಳಿಸಿ ಕೈ ಹಿಡಿಯಲು ಮುಂದಾಗಿದ್ದಾರೆ. ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಅಪ್ಪಾಜಿಗೌಡ ಇಂದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು, ಮಾಜಿ ಪರಿಷತ್ ಸದಸ್ಯ ಅಪ್ಪಾಜಿಗೌಡ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನೀಡಿರುವಂತ ಮರಿತಿಬ್ಬೇಗೌಡ ಹಾಗೂ ಮಂಡ್ಯದ ಮಾಜಿ ಶಾಸಕ ಎಂ.ಶ್ರೀನಿವಾಸ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು, ಪಕ್ಷದ ಶಾಲು ಧರಿಸಿ ಸೇರ್ಪಡೆಯಾದರು.

ಫ್ರೆಶ್ ನ್ಯೂಸ್

Latest Posts

Featured Videos