ಕಾಂಗ್ರೆಸ್: ಮತ್ತೊಂದು ವಿಕೆಟ್ ಪತನ

ಕಾಂಗ್ರೆಸ್: ಮತ್ತೊಂದು ವಿಕೆಟ್ ಪತನ

ಬೆಳಗಾವಿ, ಜು. 8 : ಶಾಸಕಿ ಅಂಜಲಿ ನಿಂಬಾಳ್ಕರ್, ತಮ್ಮ ಶಾಸಕ ಸ್ಥಾನಕ್ಕೆ ನಾಳೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತೊಂದು ವಿಕೆಟ್ ನಾಳೆ ಪತನವಾಗಲಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್, ಎಲ್ಲಾ ನಾಯಕರ ಜೊತೆಗೆ ಮಾತನಾಡಿದ್ದೇನೆ. ಇಂದು ಸಂಜೆಯೊಳಗೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ನಾಳೆ ನಾನು ಶಾಸಕಿ ಸ್ಥಾನಕ್ಕೆ ನೀಡುವುದಾಗಿ ಅಧಿಕೃತವಾಗೇ ಸ್ಪಷ್ಟಪಡಿಸಿದ್ದಾರೆ.
ಅತೃಪ್ತರು ವಾಪಸ್ ಬನ್ನಿ ಮಂತ್ರಿ ಮಾಡ್ತೇವೆ ಅಂತಾ ಸಿದ್ದರಾಮಯ್ಯ ಅಂತಿದ್ರೆ. ಮತ್ತೊಂದೆಡೆ ಹೋದವರು ಬರೋದಿರಲಿ,ಇದ್ದವರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ನಾಳೆ ಬೆಳಗಾವಿಯ ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್, ಅಧಿಕೃತವಾಗಿ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಕ್ ನೀಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos