ಕಲಬುರಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಂಧನ

ಕಲಬುರಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಂಧನ

ಕಲಬುರಗಿ, ಜೂ. 27 : ಪಾಕಿಸ್ತಾನ್ ಜಿಂದಾಬಾದ್ ಸಾಂಗ್ ಹಾಕಿ, ತನ್ನ ಹಾಗೂ ದಾವೂದ್ ಇಬ್ರಾಹಿಂ ಪೋಟೋ ಎಡಿಟ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತ ಖಾಸಿಂ ಸಾಬ್ ನನ್ನು ಪೊಲೀಸ್ ರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವುರ್ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಖಾಸಿಮ್ ಸಾಬ್. ಈತನು ಮೂರೂವರೆ ನಿಮಿಷದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ದಾವೂದ್ ಇಬ್ರಾಹಿಂ ಪೋಟೊ ಜೊತೆ ತನ್ನ ಫೊಟೊ ಎಡಿಟ್ ಮಾಡಿ, ಪಾಕಿಸ್ತಾನ್ ಜಿಂದಾಬಾದ್ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಬೆನ್ನಲ್ಲೇ ಬುಧವಾರ ತಡರಾತ್ರಿ ವಾಡಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ಖಾಸಿಮ್ ಸಾಬ್ ನನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos