ಲೋಕಸಭೆ ಚುನಾವಣೆ: ಕಾಂಗ್ರೆಸ್ ನಿಂದ 18 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ಲೋಕಸಭೆ ಚುನಾವಣೆ: ಕಾಂಗ್ರೆಸ್ ನಿಂದ 18 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ನವದೆಹಲಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 18 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ನಿನ್ನೆ ರಾತ್ರಿ ಬಿಡುಗಡೆಗೊಳಿಸಿದೆ.

ಈ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಮುಖುಲ್‌ ಸಂಗ್ಮಾ ಅವರನ್ನು ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದಲ್ಲಿ, ಅಸ್ಸಾಂನಲ್ಲಿ ಐವರು, ಮೇಘಾಲಯದಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ ಒಬ್ಬರು, ಸಿಕ್ಕಿಂ ಮತ್ತು ನಾಗಾಲೆಂಡ್‌ನಲ್ಲಿ ತಲಾ ಒಬ್ಬರು, ತೆಲಾಂಗಾಣದಲ್ಲಿ ಎಂಟು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ.

ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ಸುಷ್ಮಿತಾ ದೇವ್‌ ಹಾಗೂ ಕಲಿಯಾಬೊರ್‌ ಕ್ಷೇತ್ರದಿಂದ ಗೌರವ್‌ ಗೊಗೊಯ್‌ ಸ್ಪರ್ಧಿಸಲಿದ್ದಾರೆ. ಇವರಿಬ್ಬರೂ ಹಾಲಿ ಸಂಸದರಾಗಿದ್ದಾರೆ.

ಇನ್ನು ಶಿಲಾಂಗ್‌ನಿಂದ ಮಾಜಿ ಕೇಂದ್ರ ಸಚಿವ, ಸಂಸದ ವಿನ್ಸೆಟ್‌ ಪಾಲಾ, ದಿಬ್ರುಗರ್‌ನಿಂದ ಪಬನ್‌ ಸಿಂಗ್ ಘಟೊವರ್ ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶದ ಮೀಸಲಾತಿ ಕ್ಷೇತ್ರ ಬಾರಾಬಂಕಿಯಿಂದ ಹಿರಿಯ ದಲಿತ ಮುಖಂಡ ಪಿ.ಎಲ್.ಪುನಿಯಾ ಅವರ ಪುತ್ರ ತನುಜ ಪುನಿಯಾ ಅವರನ್ನು ಸ್ಪರ್ಧೆಗಿಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos