ಲೋಕಸಭಾ ಚುನಾವಣೆ; ಕಾಂಗ್ರೆಸ್ ಮೊದಲ ಬಿಡುಗಡೆ

ಲೋಕಸಭಾ ಚುನಾವಣೆ; ಕಾಂಗ್ರೆಸ್ ಮೊದಲ  ಬಿಡುಗಡೆ

ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಿನ್ನೆ ಬಿಡುಗಡೆಯಾಗಿರುವ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗುವ ಮೂಲಕ ಕಾರ್ಯಕರ್ತರಲ್ಲಿ ಅಚ್ಚರಿ ತಂದಿದೆ.

ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ಹೆಸರಿದ್ದು, ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಹೆಸರು ನಾಪತ್ತೆಯಾಗಿದೆ.

ಕಾಂಗ್ರೆಸ್ ಘೋಷಣೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸೋನಿಯಾ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದು ಕಾರ್ಯಕರ್ತರಲ್ಲಿ ಅಚ್ಚರಿಯೊಂದಿಗೆ ಹೊಸ ಹುಮ್ಮಸ್ಸು ಕೂಡ ನೀಡಿದೆ. ಅಂತೆಯೇ ಪ್ರಿಯಾಂಕಾ ಗಾಂಧಿ ಅವರು ಬೇರೊಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು.

ಕಾಂಗ್ರೆಸ್‍ನ ಈ ಪಟ್ಟಿಯಲ್ಲಿ ಉತ್ತರ ಪ್ರದೇಶದಲ್ಲಿ 11 ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಗುಜರಾತ್‍ನ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಕಾಂಗ್ರೆಸ್‍ನಲ್ಲಿ ಮೈತ್ರಿ ಮಾಡಿಕೊಂಡ ನಂತರ ಒಂಟಿಯಾಗಿಯೇ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ.

15 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:

ಉತ್ತರ ಪ್ರದೇಶದ ರಾಯ್ ಬರೇಲಿ- ಸೋನಿಯಾ ಗಾಂಧಿ, ಅಮೇಥಿ- ರಾಹುಲ್ ಗಾಂಧಿ, ಫರುಖಾಬಾದ್- ಸಲ್ಮಾನ್ ಖುರ್ಷಿದ್, ಖುಷಿ ನಗರ್- ಆರ್ಪಿಎನ್ ಸಿಂಗ್, ಧೌರಾಹ್ರಾ- ಜತಿನ್ ಪ್ರಸಾದ್, ಸಹರಾನ್‍ಪುರ- ಇಮ್ರಾನ್ ಮಸೂದ್, ಬದೌನ್- ಸಲೀಂ ಇಕ್ಬಾಲ್ ಶೇರ್ವಾನಿ, ಉನ್ನಾವ್- ಅನು ಟಂಡನ್. ಅಕ್ಬಪುರ್- ರಾಜಾರಾಂ ಪಾಲï, ಜಲೌನ್- ಬ್ರಿಜ್ ಲಾಲ್ ಕರ್ಬೀ, ಫೈಜಾಬಾದ್- ನಿರ್ಮಲ್ ಖಾತ್ರಿ,ಗುಜರಾತ್‍ನ ಅಹಮದಾಬಾದ್- ರಾಜು ಪಾಮರ್, ವಡೋದರ- ಪ್ರಶಾಂತ್ ಪಟೇಲ್, ಚೋಟಾ ಉದಯಪುರ್- ರಂಜಿತ್ ಮೋಹನ್ ಸಿನ್ಹಾ ರಾವತ್, ಆನಂದ್- ಭರತ್ ಸಿನ್ಹಾ ಎಂ. ಸೋಲಂಕಿ

ಫ್ರೆಶ್ ನ್ಯೂಸ್

Latest Posts

Featured Videos