ನೀರಿಗಾಗಿ ಪರದಾಡುವ ಸ್ಥಿತಿ

ನೀರಿಗಾಗಿ ಪರದಾಡುವ ಸ್ಥಿತಿ

ಜೇವರ್ಗಿ: ತಾಲೂಕಿನ ಬದನಿಹಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸುಮಾರು ಒಂದು ವಾರ ಕಳೆದರೂ ಗ್ರಾಮದ ನೀರಿನ ಸಮಸ್ಯೆ ಬಗೆಹರಿದಿಲ್ಲ ನೀರಿಗಾಗಿ ಒಂದು ಕಿ.ಮೀ. ನಿಂದ ತಲೆ ಮೇಲೆ ಹೊತ್ತು ತರುವ ಪರಿಸ್ಥಿತಿ ಗ್ರಾಮಕ್ಕೆ ಎದುರಾಗಿದೆ. ಗ್ರಾಮದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ೧೪,೧೫ ನೇ ಹಣಕಾಸಿನಲ್ಲಿ ನೀರಿನ ಮೂಲಗಳ ನಿವಾರಣೆಗಾಗಿಯೇ ಕರ್ನಾಟಕ ರಾಜ್ಯದಿಂದ ಗ್ರಾಮೀಣ ಅಭಿವೃದ್ಧಿ ನಿಗಮಕ್ಕೆ ನೀರಿನ ಮೂಲಗಳ ನಿವಾರಣೆಗಾಗಿ ಶೇ.೩೫ರಷ್ಟು ಅನುದಾನ ಬರುತ್ತದೆ. ರಂಜಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ೪ ಗ್ರಾಮಗಳಲ್ಲಿ ಕೈಪಂಪುಗಳೂ ಮೋಟಾರ್ ರಿಪೇರಿ ಹಾಗೂ ಸಾಮಗ್ರಿಗಳಿಗೆ ಪ್ರತಿಯೊಂದಕ್ಕೂ ೧೫ನೇ ಹಣಕಾಸಿನಲ್ಲಿ ಯಾವುದೇ ರೀತಿಯ ನೀರಿನ ಮೂಲಗಳ ನಿವಾರಣೆ ಗ್ರಾಮದಲ್ಲಿ ಕಂಡುಬಂದಿಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಆದರೆ ಯಾವುದೆ ಉಪಯೋಗಗಳು ಆಗಿಲ್ಲ. ದಯವಿಟ್ಟು ಖುದ್ದಾಗಿ ತಾವೇ ನಿಂತು ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos