ಚಿಕ್ಕ ಬದಲಾವಣೆಯಿಂದಲೇ ಸಮಗ್ರ ಬೆಳವಣಿಗೆ ಸಾಧ್ಯ

ಚಿಕ್ಕ ಬದಲಾವಣೆಯಿಂದಲೇ ಸಮಗ್ರ ಬೆಳವಣಿಗೆ ಸಾಧ್ಯ

ದೇವನಹಳ್ಳಿ, ಅ. 21: ಬಸವಾದಿ ಶರಣರ ಅನುಭಾವದಿಂದ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಒಂದು ಚಿಕ್ಕ ಬದಲಾವಣೆಯಿಂದಲೇ ಸಮಗ್ರವಾದ ಸಾಮಾಜಿಕ, ಶೈಕ್ಷಣಿಕ ಬದಲಾವಣೆ ಸಾಧ್ಯವಿದೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕಾಗಿ ಕನಿಷ್ಟಮಟ್ಟದಲ್ಲಿಯಾದರೂ ಸೇವೆ ಮಾಡುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳುವುದು ಬೆಳವಣಿಗೆ ದಿಕ್ಸೂಚಿ ಎಂದು ಶ್ರೀ ಸಿದ್ಧಗಂಗಾ ಕ್ಷೇತ್ರಾಧ್ಯಕ್ಷ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘ, ಬೂದಿಗೆರೆ ಗ್ರಾಮಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಡಾ.ಶಿವಕುಮಾರಮಹಾಸ್ವಾಮೀಜಿ ಅವರ ಕಂಚಿನ ಪುತ್ಥಳಿಪ್ರತಿಷ್ಟಾಪನೆಯ ಶಿಲಾನ್ಯಾಸ, ಶಾಲಾ ನವೀಕೃತ ಕೊಠಡಿಗಳ ಲೋಕಾರ್ಪಣೆ, ನೂತನ 8 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ, ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಗ್ರಾಮೀಣಭಾಗದಲ್ಲಿ ವಿದ್ಯಾದಾನ ಮಾಡುವ ಕಾರ್ಯವು ಶ್ರೇಷ್ಟವಾದುದು, ಶಾಲೆಯನ್ನು ಆರಂಭಿಸಿ ಈ ಭಾಗದಲ್ಲಿ ಉತ್ತಮಶಿಕ್ಷಣ ನೀಡಲು ಶ್ರಮಸಿದ ಎಲ್ಲರೂ ಸ್ಮರಣೀಯರು. ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಕನ್ನಡಭಾಷೆ, ಸಾಹಿತ್ಯ, ಕನ್ನಡತನವನ್ನು ಉಳಿಸುವ ಕಾರ್ಯವಾಗಬೇಕು.

ಶಿಕ್ಷಣಕ್ಕೆ ಒತ್ತು ಅಗತ್ಯ: ಉತ್ತಮ ಸಮಾಜ ನಿರ್ಮಾಣಕಾರ್ಯವು ಶಾಲೆಯಿಂದ ಆಗಬೇಕಿದ್ದು, ಮಕ್ಕಳಲ್ಲಿ ಸಂಸ್ಕಾರ, ದೇಶಪ್ರೇಮ, ಗುರುಹಿರಿಯರಲ್ಲಿ ಗೌರವಾದರ ಭಾವನೆಯನ್ನು ಬೆಳೆಸುವ ಕಾರ್ಯವಾಗಬೇಕು. ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಅಗತ್ಯವು ಇಂದಿಗೆ ಅನಿವಾರ್ಯವಾದುದು. ವೈಧ್ಯ ಮತ್ತು ಶಿಕ್ಷಕ ವೃತ್ತಿ ಶ್ರೇಷ್ಠವಾದದು. ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಬೇಕು ಎಂದರು.

ಆಂಗ್ಲಮಾಧ್ಯಮ ಆರಂಭ: ಸಾವಿರಾರು ಬಡ, ಗ್ರಾಮೀಣಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಶಾಲೆಯಲ್ಲಿ ಮಕ್ಕಳ ದಾಖಲಾತಿಯು ಆಂಗ್ಲಮಾಧ್ಯಮಶಾಲೆಗಳ ಪ್ರಭಾವದಿಂದಾಗಿ ಕುಸಿಯುತ್ತಿದ್ದು, ಮಕ್ಕಳ ಪೋಷಕರ ಹಿತದೃಷ್ಟಿಯಿಂದ ಆಂಗ್ಲಮಾಧ್ಯಮಶಾಲೆಯನ್ನು ಆರಂಭಿಸಲು ಚಿಂತಿಸಲಾಗುವುದು ಎಂದರು.

ನ್ಯಾಶನಲ್‌ಅಕಾಡೆಮಿ ಆಫ್ ಕಸ್ಟಮ್ಸ್ ನಾರ್ಕಟಿಕ್ಸ್ (ನಾಸಿನ್)ನ ನಿವೃತ್ತ ಪ್ರಾಂಶುಪಾಲ ಕೋದಂಡರಾಮಯ್ಯ ಮಾತನಾಡಿ, ಶಿಕ್ಷಕ ವೃತ್ತಿಯು ಅತಿ ಪವಿತ್ರವಾದುದಾಗಿದ್ದು, ಸಮಾಜದ ಒಳಿತಿಗಾಗಿ ಗಳಿಸಿ ಉಳಿಸಿದ್ದರಲ್ಲಿ ಸ್ವಲ್ಪಭಾಗವನ್ನಾದರೂ ಸಮಾಜದ ಒಳಿತಿಗೆ ವಿನಿಯೋಗಿಸುವ ಗುಣವು ಮಹತ್ವದ್ದು, ತಂದೆ, ತಾಯಿ, ಗುರುವಿನಿಂದ ಮಗುವಿಗೆ ವ್ಯಕ್ತಿತ್ವ ರೂಪುಗೊಳ್ಳಬಲ್ಲದು ಎಂದರು.

ಬೆಂಗಳೂರಿನ ಕೆಂಪೇಗೌಡ ಕಿಡ್ ನಕಲ್ಲಿನ ಆಸ್ಪತ್ರೆಯ ವೈದ್ಯ ಡಾ.ಎಚ್.ಕೆ.ನಾಗರಾಜು ಮಾತನಾಡಿ, ಮಕ್ಕಳಲ್ಲಿ ಉನ್ನತ ಗುರಿ ಇದ್ದು ಗುರುವಿನ ಮಾರ್ಗದರ್ಶನ ದೊರೆತರೆ ಶ್ರೇಷ್ಟವಾದುದನ್ನೂ ಸಾಧಿಸಲುಬಹುದು ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಶಿಕ್ಷಣದ ಜೊತೆಗೆ ಮೂಲಶಿಕ್ಷಣವನ್ನು ಮಕ್ಕಳದಿಸೆಯಲ್ಲಿ ಕೊಡಿಸಬೇಕು. ಬೇಸಿಕ್ ವಿಜ್ಞಾನದ ಶಾಖೆಗಳಿಗೆ ಮಕ್ಕಳನ್ನು ಪ್ರೇರೇಪಿಸುವ ಕಾರ್ಯವಾಗಬೇಕು, ಶೈಕ್ಷಣಿಕ ಕ್ಷೇತ್ರದ ಔನತ್ಯದಲ್ಲಿ ಸಮುದಾಯದ ಪಾತ್ರವು ಮಹತ್ವದ್ದು ಎಂದರು.

ಗ್ರಾಮಪಂಚಾಯಿತಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಅಧ್ಯಕ್ಷತೆವಹಿಸಿ ಮಾತನಾಡಿ ಶಾಲೆಗೆ ದಾನ ನೀಡುವ ಮನಸ್ಸು ಉಳ್ಳವರು ದೇರಿಗೆ ಸಮಾನ ದೇವ ಮೇಲೆ ಭಕ್ತಿಯ ಜೋತೆಗೆ ಶಾಲೆಗಳ ಅಭಿವೃದ್ಧಿಯ ಬಗ್ಗೆ ಹೆಚ್ಚು ಓತ್ತು ನೀಡಿದರೆ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾದರಿಂದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಶಾಲೆಗಳಿಗೆ ನೆನಪಾಗಿ ಉಳಿಯುವ ಕೆಲಸ ಮಾಡಿದಾಗ ಮಾತ್ರ ಶಾಲೆಗಳು ಉನತ್ತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ತೀಳಿಸಿದರು. ಶಿಕ್ಷಕರು ಪೋಷಕರನ್ನ ಕರೆದು ಮಕ್ಕಳ ಬಗ್ಗೆ ಮನಮುಟ್ಟುವಂತೆ ತಿಳಿ ಹೇಳಬೇಕು. ಆಗ ಪರೀಕ್ಷೆಯಲ್ಲಿ ಶಾಲಾಗೆ ನೂರರಷ್ಟು ಫಲಿತಾಂಶ ಬರುತ್ತದೆ. ಸರಕಾರ ಗ್ರಾಮೀಣ ಭಾಗದಲ್ಲಿ ಅನರಕ್ಷತೆಯನ್ನು ಹೊಗಲಾಡಿಸಲು ಕಲಿಕೆಗಾಗಿ ಸಾಕಷ್ಟು ಅನುಧಾನ ಬಿಡುಗಡೆ ಮಾಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಅಕ್ಷರವಂತರಾಗಬೇಕು ಎಂದು ಹೇಳಿದರು

ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿಶ್ವನಾಥಯ್ಯ, ಎಚ್.ಎಸ್.ಬಸವರಾಜು, ಎನ್.ವಿಶ್ವನಾಥ್, ಜಿಲ್ಲಾ ಶರಣಸಾಹಿತ್ಯಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ಹಳೆಯವಿದ್ಯಾರ್ಥಿ, ಹೋರಾಟಗಾರ್ತಿ ಶಾಂತಾ, ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಬೈರೇಗೌಡ, ಶಿವಣ್ಣ, ಎಚ್.ಎನ್.ರಾಜಣ್ಣ, ಪ್ರಭಾಕರ್, ತಾಲೂಕುಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ ತಾಲೂಕುಪಂಚಾಯಿತಿ ಸದಸ್ಯೆ ಭಾರತಿಲಕ್ಷ್ಮಣಗೌಡ ಮಾತನಾಡಿದರು.

ಈ ವೇಳೆಯಲ್ಲಿ ತಾಪಂ ಮಾಜಿ ಸದಸ್ಯ ಲಕ್ಷಣಗೌಡ , ಮುಖ್ಯಶಿಕ್ಷಕ ಪಂಕಜಾ, ಮುಖಂಡರಾದ ಕೋದಂಡರಾಮಯ್ಯ, ವಿಶ್ವನಾಥಯ್ಯ, ಪ್ರಭಾಕರ್, ಹರೀಶ್, ರಾಮ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos