ನನ್ನ ಶ್ಯಾಮನೂರು ನಡುವಿನ ವಾಕ್ಸಮರ ಮುಗಿದ ಅಧ್ಯಾಯ: ಎಂ.ಬಿ.ಪಾಟೀಲ್

ನನ್ನ ಶ್ಯಾಮನೂರು ನಡುವಿನ ವಾಕ್ಸಮರ ಮುಗಿದ ಅಧ್ಯಾಯ: ಎಂ.ಬಿ.ಪಾಟೀಲ್

ಮೈಸೂರು: ನನ್ನ ಮತ್ತು ಶ್ಯಾಮನೂರು ಶಿವಶಂಕರಪ್ಪ ನಡುವಿನ ವಾಕ್ಸಮರ ಇಲ್ಲಿಗೆ ಮುಗಿದ ಅಧ್ಯಾಯ. ಶ್ಯಾಮನೂರು ಶಿವಶಂಕರಪ್ಪ ನನ್ನ ತಂದೆ ಸಮಾನ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

ನಗರದ ಕರ್ನಾಟಕ ಪೊಲೀಸ್ ಅಕಾಡೆಮಿ ಮೈದಾನದಲ್ಲಿ ನಡೆದ 41ನೇ ತಂಡದ ಪ್ರೊಬೇಷನರಿ ಪಿಎಸ್ಐ (ಸಿವಿಲ್) 11 ತಿಂಗಳ ಬುನಾದಿ ತರಬೇತಿ ಪಥಸಂಚಲನದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಲಿಂಗಾಯತ ಧರ್ಮ ಅನ್ನುವುದು ನಮ್ಮ ಅಸ್ಮಿತೆ. ಜೈನರು, ಭೌದ್ಧರು, ಮುಸ್ಲಿಂರು, ಕ್ರಿಶ್ಚಿಯನ್ನರಿಗೆ ವಿಶೇಷ ವ್ಯಕ್ತಿ ಇರುವಂತೆ ನಮಗೂ ಬಸವಣ್ಣ ವಿಶೇಷ ವ್ಯಕ್ತಿ. ಇತರೆ ಧರ್ಮಗಳಿಂದ ಏನಾದರೂ ತೊಂದರೆ ಆಗಿದೆಯಾ? ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಬಂದಿದ್ದಕ್ಕೆ ಬೇರೆ ರೀತಿ ಊಹಿಸಲಾಗಿತ್ತು. ನಾನು ಈಗ ಗೃಹ ಸಚಿವನಾಗಿದ್ದೇನೆ. ನಾನು ವೈಯಕ್ತಿಕವಾಗಿ ಧರ್ಮದಲ್ಲಿ ಇರುತ್ತೇನೆ. ಆದರೆ ಕಾನೂನು ಹೋರಾಟ ಮುಂದುವರಿಯುತ್ತದೆ‌ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos