ಚೊಂಬು ಜಾಹೀರಾತು: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಚೊಂಬು ಜಾಹೀರಾತು: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಚೊಂಬು ಜಾಹೀರಾತು ನೀಡುವ ಮೂಲಕವಾಗಿ ಅವಹೇಳನ ಮಾಡಿದ್ದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ನಿನ್ನೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ಸಲ್ಲಿಸಿದೆ.

ಇದು ಚೊಂಬು’ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಪಕ್ಷವು ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಅದರ ಫೋಟೋದೊಂದಿಗೆ ದೂರು ನೀಡಿರುವ ಬಿಜೆಪಿ, ‘ಚೊಂಬು’ಪದವು ಕನ್ನಡದ ಆಡುಭಾಷೆಯಾಗಿದೆ ಮತ್ತು ಇದನ್ನು ‘ಮೋಸಗೊಳಿಸುವುದು ಅಥವಾ ಖಾಲಿ ಭರವಸೆಗಳನ್ನು’ನೀಡುವುದನ್ನು ಸೂಚಿಸಲು ಬಳಸಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿಗಿದೆ.

ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು ನೀಡಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos