ಬೆಂಗಳೂರು: ಶಿವರಾಜ್ ಕೆಆರ್ ಪೇಟೆ ಅವರು ಕಾಮಿಡಿ ಕಿಲಾಡಿಗಳಿಂದ ಅತ್ಯಂತ ಹೆಚ್ಚು ಜನಪ್ರಿಯವನ್ನು ಪಡೆದು ಸ್ಯಾಂಡಲ್ ವುಡ್ ನಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟನೆ ಮಾಡಿದ್ದು ನಟ ಶಿವರಾಜ್ ಕೆಆರ್ ಪೇಟೆ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದೆ.
ಬೆಂಗಳೂರಿನ ಸುಬ್ರಮಣ್ಯನಗರ ಠಾಣೆಯಲ್ಲಿ ಶಿವರಾಜ್ ಕೆಆರ್ ಪೇಟೆ ವಿರುದ್ಧ ಶಾರದಾ ಬಾಯಿ ಎಂಬುವರು ದೂರು ನೀಡಿದ್ದಾರೆ. ಕಾರು ಟಚ್ ಮಾಡಿದ್ದಲ್ಲದೇ, ತಮೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೆಂಗಳೂರಿನ ರಾಜಕುಮಾರ್ ರಸ್ತೆಯ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಾರ್ಚ್ 30ರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಡವಾಗಿ ವರದಿಯಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಶಿವರಾಜ್ ಕೆಆರ್ ಪೇಟೆ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರಂತೆ. ಈ ಬಗ್ಗೆ NCR ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.