ಹಿಮಾಲಯ ಡ್ರಗ್ ಕಂಪನಿ ಮುಖ್ಯಸ್ಥನ ವಿರುದ್ಧ ದೂರು!

ಹಿಮಾಲಯ ಡ್ರಗ್ ಕಂಪನಿ ಮುಖ್ಯಸ್ಥನ ವಿರುದ್ಧ ದೂರು!

ಬೆಂಗಳೂರು, ಸೆ.13: ಹಿಮಾಲಯ ಡ್ರಗ್ ಕಂಪನಿ ಮುಖ್ಯಸ್ಥನ ವಿರುದ್ಧ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಹೋದ್ಯೋಗಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಮಚಂದ್ರ ಸುಂದರಂ ಕಿರುಕುಳ ನೀಡುತ್ತಿದ್ದ ಮುಖ್ಯಸ್ಥ. ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್ ಕಂಪೆನಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿದ್ದ ಮಹಿಳೆಗೆ ಡೇಟಿಂಗ್ಗೆ ಬರುವಂತೆ ಈತ ನಿತ್ಯ ಕಾಡುತ್ತಿದ್ದ. ಅಲ್ಲದೇ ಮನೆಗೆ ಡ್ರಾಪ್ ನೀಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದ.

ಗಂಡನನ್ನು ಬಿಟ್ಟು ನನ್ನ ಜೊತೆ ಬಾ. ರೆಸಾರ್ಟ್ನಲ್ಲಿ ಖಷಿಯಿಂದ ಕಾಲ ಕಳೆಯೋಣ ಎಂದೆಲ್ಲಾ ಆಕೆಗೆ ಹಿಂಸೆ ನೀಡುತ್ತಿದ್ದ.  ಈತನ ಕಿರುಕುಳದ ಧ್ವನಿ ಎತ್ತಿದ್ದಕ್ಕೆ ನೀನು ಪೊಲೀಸರಿಗೆ ದೂರು ನೀಡಿದರೆ, ನೀನೇ ಕೋರ್ಟ್ ಕಚೇರಿ ಅಲೆಯಬೇಕಾಗುತ್ತದೆ ಎಂದು ಬೆದರಿಸುತ್ತಿದ್ದ.

ಈ ಪ್ರಕರಣದ ಕುರಿತು ಮಾದನಾಯಕನಹಳ್ಳಿ ಪೊಲೀಸರಿಗೂ ಸಂತ್ರಸ್ತೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಕಂಪನಿಯಲ್ಲಿ ಇಷ್ಟೆಲ್ಲಾ ನಡೆದರೂ ಆರೋಪಿ ವಿರುದ್ಧ ಮಾತ್ರ ಯಾವುದೇ ಕ್ರಮಕ್ಕೆ ಕಂಪನಿ ಮುಂದಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos