ಗೌಪ್ಯತಾ ಕಾಯ್ದೆಯನ್ನು ಉಲ್ಲಂಘನೆ: ಸಿಎಂ ಹೆಚ್ಡಿಕೆ ವಿರುದ್ಧ ದೂರು

ಗೌಪ್ಯತಾ ಕಾಯ್ದೆಯನ್ನು ಉಲ್ಲಂಘನೆ: ಸಿಎಂ ಹೆಚ್ಡಿಕೆ ವಿರುದ್ಧ ದೂರು

ಬೆಂಗಳೂರು, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮುಂಚಿತವಾಗಿಯೇ ಹೇಳಿಕೆ ನೀಡಿ ಅಧಿಕೃತ ಗೌಪ್ಯತಾ ಕಾಯ್ದೆಯನ್ನು ಉಲ್ಲಂಘಿಸಿದ್ದು, ಕೂಡಲೇ ಮಧ್ಯಪ್ರವೇಶಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮುಂಚಿತವಾಗಿಯೇ ಹೇಳಿಕೆ ನೀಡಿ ಅಧಿಕೃತ ಗೌಪ್ಯತಾ ಕಾಯ್ದೆಯನ್ನು ಉಲ್ಲಂಘಿಸಿದ್ದು, ಕೂಡಲೇ ಮಧ್ಯಪ್ರವೇಶಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ರಾಜಭವನ ಕದ ತಟ್ಟಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಡಾ. ಸಿ.ಎನ್.ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಿಯೋಗ ಇಂದು ಮಧ್ಯಾಹ್ನ ರಾಜಭವನಕ್ಕೆ ಭೇಟಿ ನೀಡಿತು. ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿಯಾಗಿ ಅರ್ಧ ಗಂಟೆ ಚರ್ಚೆ ನಡೆಸಿತು. ಐಟಿ ದಾಳಿ ಬಗ್ಗೆ ಮುಂಚೆ ಗೊತ್ತಿತ್ತು ಎಂಬ ಸಿಎಂ ಹೇಳಿಕೆ ವಿರುದ್ಧ ಹಾಗೂ ಐಟಿ ಕಚೇರಿ ಮುಂದೆ ನೇತೃತ್ವದಲ್ಲಿ ನಡೆಸಿದ್ದ ಪ್ರತಿಭಟನೆ ವಿರುದ್ಧ ದೂರು ನೀಡಿತು. ಗೌಪ್ಯತೆ ಪ್ರಮಾಣ ಉಲ್ಲಂಘನೆ ಮಾಡಿದ್ದಾರೆ ಎಂದು ಹಾಗೂ ಪುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎಂಬ ಸಿಎಂ ಹೇಳಿಕೆ ವಿಚಾರವಾಗಿಯೂ ದೂರು ಸಲ್ಲಿಕೆ ಮಾಡಿ ಕ್ರಮಕ್ಕೆ ಒತ್ತಾಯಿಸಿತು. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ವತಿಯಿಂದ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಎರಡು ಮನವಿ ಸಲ್ಲಿಸಿದ್ದೇವೆ.
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದೇವೆ. ಸಿಎಂ ಆಗಿ ಗೌಪ್ಯತಾ ಪ್ರಮಾಣ ಉಲ್ಲಂಘಿಸಿದ್ದಾರೆ. ಐಟಿ ದಾಳಿಯ ಬಗ್ಗೆ ಮಾಹಿತಿ ಹೇಗೆ ಸಿಕ್ಕಿತು ಎಂದು ಸಿಎಂ ಅವರನ್ನು ವಿಚಾರಣೆಗೊಳಪಡಿಸಬೇಕು. ಜೊತೆಗೆ ಪುಲ್ವಾಮಾ ದಾಳಿಯ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆಯೂ ರಾಜ್ಯಪಾಲರು ಗಮನ ಹರಿಸಬೇಕೆಂದು ಬಿಜೆಪಿ ಪರವಾಗಿ ಮನವಿ ಮಾಡಿದ್ದೇವೆ ಎಂದರು. ಶಾಸಕ ಡಾ. ಅಶ್ವತ್ಥನಾರಾಯಣ ಮಾತನಾಡಿ, ಸಿಎಂ ಕುಮಾರಸ್ವಾಮಿ ಹಿಟ್ ಅಂಡ್​ ರನ್ ಹೇಳಿಕೆ ಕೊಡುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ. ಐಟಿ ರೇಡ್ ಕುರಿತು ಒಂದು ದಿನ ಮೊದಲೇ ಹೇಳಿಕೆ ಕೊಡುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ. ಗೌಪ್ಯತಾ ಪ್ರಮಾಣ ವಚನವನ್ನೂ ಕೂಡ ಸಿಎಂ ಮುರಿದಿದ್ದಾರೆ. ಅಷ್ಟು ಸಾಲದು ಎನ್ನುವಂತೆ ಐಟಿ ರೇಡ್ ಆದ ತಕ್ಷಣ ಸಿಎಂ ನೇತೃತ್ವದಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ‌ಧರಣಿ ನಡೆಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಪುಲ್ವಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ನಂಗೆ ಗೊತ್ತಿತ್ತು ಅಂತಾ ಸಿಎಂ ಹೇಳಿದ್ದಾರೆ. ಯಾವುದೊ ಡಿಫೆನ್ಸ್ ಅಧಿಕಾರಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದಾಗಿ ಸಿಎಂ ಮಾತನಾಡಿದ್ದಾರೆ. ಇಂತಹ ಹೇಳಿಕೆ ಕೊಡುವ ಮೂಲಕ ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡ್ತಿದ್ದಾರೆ. ಸಿಎಂ ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದಾರೆ. ಕೇವಲ ಚುನಾವಣೆ ಗೆಲ್ಲುವುದಕ್ಕೆ ಇದೆಲ್ಲವನ್ನ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ದೂರನ್ನ ನಾವು ಕೊಟ್ಟಿದ್ದೇವೆ. ನಮ್ಮ ದೂರನ್ನ ಕೇಂದ್ರ ಗೃಹ ಇಲಾಖೆಗೆ ಕಳಿಸುವ ಭರವಸೆಯನ್ನ ರಾಜ್ಯಪಾಲರು ಕೊಟ್ಟಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos