ಅದಾಲತ್‌ನಲ್ಲಿ ಕಳಪೆ ರಾಗಿ, ಅಕ್ಕಿ ಬಗ್ಗೆ ದೂರು;

ಅದಾಲತ್‌ನಲ್ಲಿ ಕಳಪೆ ರಾಗಿ, ಅಕ್ಕಿ ಬಗ್ಗೆ ದೂರು;

ಗೌರಿಬಿದನೂರು: ಅಹಾರ ಅಯೋಗ ಪ್ರಾರಂಭವಾಗಿದ್ದು ಇದರ ಮೂಲ ಉದ್ದೇಶ ಅಹಾರ ಇಲಾಖೆ ಯಾವುದೇ ಸಮಸ್ಯೆಗಳು ಇದ್ದರೂ ಅಯೋಗದ ಗಮನಕ್ಕೆ ತಂದಲ್ಲಿ ತಕ್ಷಣವೇ ಅದನ್ನು ಬಗೆಹರಿಸಲಾಗುವುದು ಎಂದು ರಾಜ್ಯ ಅಹಾರ ಅಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿಯ ಅವರಣದ ಸಾಮಾರ್ಥ್ಯಸೌಧಲ್ಲಿ ಕರ್ನಾಟಕ ರಾಜ್ಯ ಅಹಾರ ಅಯೋಗ ಅಯೋಜಿಸಿದ್ದ ಅಹಾರ ಅದಾಲತ್ ಬಾಗವಹಿಸಿ ಮಾತನಾಡಿ ಸರ್ಕಾರದ ವಿವಿಧ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಅಹಾರ ಅಯೋಗದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಧಿಕಾರಿಗಳು ಎಲ್ಲ ಜನಸಾಮಾನ್ಯರಿಗೆ ಅಹಾರ ಪದಾರ್ಥಗಳು ತಲುಪಿಸುವಲ್ಲಿ ಬದ್ದತೆ ತೋರಬೇಕು, ಯಾವುದೇ ಕಾರಣಕ್ಕೂ ಕಳಪೆ ಮಟ್ಟದ ಧಾನ್ಯಗಳು ವಿತರಣೆ ಸಲ್ಲುದು,ಹಸಿವು ಮುಕ್ತ ದೇಶ ಉದ್ದೇಶವೇ ಇದರ ಮೂಲವಾಗಿದೆ.
ಪ್ರತಿ ತಿಂಗಳ ಸಕಾಲಕ್ಕೆ ಪಡಿತರ ವಿತರಣೆ ಮಾಡಬೇಕು ಅದರಲ್ಲೂ ಕೊರೋನಾ ಸೋಂಕು ವೇಳೆಯಲ್ಲಿ ಯಾವುದೇ ಬಡಜನರಿಗೆ ಅಹಾರ ಕೊರತೆ ಕಾಣದಂತೆ ನಿಗವಹಿಸಬೇಕು ಎಂದರು.
ಈ ಬಗ್ಗೆ ಅಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ್ ಪ್ರತಿಕ್ರಿಯಿಸಿ ಇಂತಹ ಧಾನ್ಯ ವಿತರಣೆ ಮಾಡಿದಲ್ಲಿ ಕೂಡಲೆ ಬದಲಾಣೆಗೆ ಒತ್ತಾಯಿಸಿ,ಇಲ್ಲವಾದಲ್ಲಿ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಎಂದು ತಿಳಿಸಿದರು.
ಅದಾಲತ್‌ನಲ್ಲಿ ಅಯೋಗದ ಸದಸ್ಯರಾದ ಮಂಜುಳ, ಬಿ.ಎ.ಮಹಮದ್ ಅಲಿ, ಜಿಲ್ಲಾ ಅಹಾರ ಜಂಟಿ ನಿರ್ದೇಶಕರಾದ ಸವಿತ, ತಾಲ್ಲೂಕು ಅಧಿಕಾರಿಗಳಾದ ಶಶಿಕಲಾ, ರಂಗಸ್ವಾಮಿ, ತಹಸೀಲ್ದಾರ್ ಆಶಾ, ತಾಪಂ ಅಧಿಕಾರಿಗಳಾದ ಚಿನ್ನಪ್ಪಯ್ಯ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos