ಆಯುಕ್ತರ ಬೆವರಿಳಿಸಿದ ಹೈಕೋರ್ಟ್

ಆಯುಕ್ತರ ಬೆವರಿಳಿಸಿದ ಹೈಕೋರ್ಟ್

ಬೆಂಗಳೂರು, ಫೆ. 1 : ನಗರದ ರಸ್ತೆ ಗುಂಡಿಗಳ ದುರಸ್ತಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ಬಿಬಿಎಂಪಿ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿರುವ ಹೈಕೋರ್ಟ್, ಇನ್ನು ಮುಂದೆ ರಸ್ತೆ ದುರಸ್ತಿ ಕುರಿತು ಸ್ವತಃ ನಿಗಾ ವಹಿಸುವುದಾಗಿ ಹೇಳಿದೆ. ”ರಸ್ತೆ ಗುಂಡಿಗಳ ದುರಸ್ತಿ ಕುರಿತು ನಿರ್ದೇಶನ ನೀಡಿದರೆ ನೀವು(ಬಿಬಿಎಂಪಿ ) ಸರಿಯಾಗಿ ಪಾಲಿಸುವುದಿಲ್ಲ. ಹಾಗಾಗಿ, ಇನ್ನು ಮುಂದೆ ಕೋರ್ಟ್ ನಿಗಾ ಇಡಲಿದೆ. ಪಾಲಿಕೆ ರಸ್ತೆ ಗುಂಡಿ ದುರಸ್ತಿ ಮಾಡಬೇಕು, ಫೋಟೋ ಮತ್ತಿತರ ವಿವರ ಸಲ್ಲಿಸಬೇಕು, ಐಐಟಿಯಂತಹ ತಜ್ಞರ ಸಂಸ್ಥೆ ದುರಸ್ತಿ ಸರಿಯಾಗಿ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಪ್ರಮಾಣೀಕರಿಸಬೇಕೆಂದು ಆದೇಶ ನೀಡಲಾಗುವುದು.

ರಸ್ತೆಗಳ ಗುಣಮಟ್ಟ ಸರಿಪಡಿಸುವುದು ನಮಗೆ ಗೊತ್ತು. ಪ್ರತಿ ತಿಂಗಳು ನಾವು ರಸ್ತೆಗಳ ಪ್ರಗತಿ ಪರಿಶೀಲಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ. ರಸ್ತೆಗುಂಡಿಯಿಂದ ಸಂಭವಿಸುವ ಅಪಘಾತ ಹಾಗೂ ಸಾವು ನೋವಿಗೆ ಪರಿಹಾರ ನೀಡುವ ಕುರಿತಂತೆ ಕೋರ್ಟ್ ಆದೇಶ ಪಾಲಿಸದಿರುವ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್ಗೆ ಬೆವರಿಳಿಸಿದ ಹೈಕೋರ್ಟ್, ಬೇಷರತ್ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಕೋರಮಂಗಲದ ನಿವಾಸಿ ವಿಜಯನ್ ಮೆನನ್ 2015ರಲ್ಲಿ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಬೆಳಗ್ಗೆ ಮೊದಲು ವಿಚಾರಣೆಗೆ ಬಂದಾಗ, ‘ಹಿಂದಿನ ಆದೇಶ ಏಕೆ ಪಾಲಿಸಿಲ್ಲ’ ಎಂದು ನ್ಯಾಯಪೀಠ ಕಟುವಾದ ಮಾತುಗಳಲ್ಲಿ ಪ್ರಶ್ನಿಸಿತು. ಆಗ ಪಾಲಿಕೆ ಪರ ವಕೀಲ ಕೆ.ಎನ್. ಪುಟ್ಟೇಗೌಡ, ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos