ಟ್ರಂಪ್ ನಿಂದ ಭಾರತದ ವಿರುದ್ಧ ಕಮರ್ಷಿಯಲ್ ವಾರ್!

ಟ್ರಂಪ್ ನಿಂದ ಭಾರತದ ವಿರುದ್ಧ ಕಮರ್ಷಿಯಲ್ ವಾರ್!

ವಾಷಿಂಗ್ಟನ್, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಭಾರತ ಅತೀ ದುಬಾರಿ ತೆರಿಗೆ ದೇಶ ಎಂದು ಟೀಕಿಸಿ ಭಾರಿ ತೆರಿಗೆ ವಿಧಿಸಲು ಮುಂದಾಗಿರುವ ಅಮೆರಿಕಾ ಈಗ ಇಂಡಿಯಾಗೆ ನೀಡಿರುವ ಆದ್ಯತೆ ವಾಣಿಜ್ಯ ಸ್ಥಾನಮಾನ ರದ್ಧತೆಗೆ ಗಂಭೀರ ಚಿಂತನೆ ನಡೆಸಿದೆ. ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಆದ್ಯತೆಯ ಮೇರೆಗೆ ವಹಿವಾಟು ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

ಶ್ವೇತ ಭವನದಲ್ಲಿ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖೇನ ಮಾತನಾಡಿರುವ ಟ್ರಂಪ್, ಕಡಿಮೆ ತೆರಿಗೆ ಮತ್ತು ಅಮೆರಿಕ ಮಾರುಕಟ್ಟೆ ಸ್ನೇಹಿ ಪರಿಸರ ಸೃಷ್ಟಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಭಾರತ ಇದೀಗ ತನ್ನ ಮಾತು ತಪ್ಪುತ್ತಿದೆ ಎಂದು ಹೇಳಿದರು.

ಇದೇ ವೇಳೆ ಅಮೆರಿಕದಿಂದ ಸಾಕಷ್ಟು ದೇಶಗಳು ಲಾಭ ಮಾಡಿಕೊಳ್ಳುತ್ತಿವೆಯಾದರೂ, ಅದೇ ಮಟ್ಟದ ಪರಿಸರವನ್ನು ಅಮೆರಿಕದ ಉದ್ಯಮಿಗಳಿಗೆ ನಿರ್ಮಾಣ ಮಾಡಿಕೊಡುತ್ತಿಲ್ಲ. ಈ ವಿಚಾರದಲ್ಲಿ ಭಾರತ ಮತ್ತು ಟರ್ಕಿ ದೇಶಗಳೂ ಪ್ರಮುಖವಾಗಿವೆ ಎಂದು ಟ್ರಂಪ್ ಹೇಳಿದರು.

ತಮ್ಮ ಮತ್ತೊಂದು ಪತ್ರದಲ್ಲಿ ಭಾರತ ಅಮೆರಿಕಕ್ಕೆ ನೀಡಿರುವ ಭರವಸೆ ಈಡೇರಿಸಿಲ್ಲ. ಸಾಕಷ್ಟು ಕ್ಷೇತ್ರಗಳಲ್ಲಿ ಅಮೆರಿಕದ ಉದ್ಯಮಗಳಿಗೆ ಮಾರುಕಟ್ಟೆ ಸ್ನೇಹಿ ಪರಿಸರ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.

ಅಮೆರಿಕದಿಂದ ಪೂರಕ ವಾಣಿಜ್ಯ ವಹಿವಾಟ ಬಯಸುವ ರಾಷ್ಟ್ರಗಳು ಅಮೆರಿಕ ಕಾಂಗ್ರೆಸ್‍ಗೆ ನೀಡಿದ್ದ ಭರವಸೆಯಂತೆ ತೆರಿಗೆ ರಹಿತ, ವಿನಾಯಿತಿ ಮತ್ತು ಕೆಲ ಕ್ಷೇತ್ರಗಳಲ್ಲಿ ತೆರಿಗೆ ರಿಯಾಯಿತಿ ನೀಡಬೇಕಿತ್ತು.

ಆದರೆ ಭಾರತ ಮತ್ತು ಟರ್ಕಿ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ಅಮೆರಿಕ ಕಾಂಗ್ರೆಸ ಮಾನದಂಡಗಳನ್ನು ತಲುಪಲು ಈ ದೇಶಗಳು ವಿಫಲವಾಗಿವೆ. ಹೀಗಾಗಿ ಈ ದೇಶಗಳ ನಡುವೆ ಅಮೆರಿಕ ಆದ್ಯತೆ ಮೇರೆಗೆ ವಹಿವಾಟು ನಡೆಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos