ಶೈಕ್ಷಣಿಕ ಉನ್ನತಿಗೆ ಅವಕಾಶಕ್ಕೆ ಕಾಲೇಜು

ಶೈಕ್ಷಣಿಕ ಉನ್ನತಿಗೆ ಅವಕಾಶಕ್ಕೆ ಕಾಲೇಜು

ಶಿರಾ: ಪ್ರತಿಭಾವಂತ ವಿಧ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ೭೦.ಎಕರೆ ಪ್ರದೇಶದಲ್ಲಿ ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿರುವ ಕೃಷಿ ತರಬೇತಿ ಕೇಂದ್ರವನ್ನು ಕೃಷಿ ಪದವಿ ಕಾಲೇಜ್ ಆಗಿ ಪರಿವರ್ತಿಸಿ, ಜೊತೆಗೆ ಮದಲೂರು ಕೆರೆಗೆ ಹೇಮಾವತಿ ನೀರು ಬಿಡುತ್ತೆವೆ ಎಂಬುದು ನೆಪ ಮಾತ್ರವಾಗದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀಸ್ಪಟಿಕಪುರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ,ವಿಜಯೇಂದ್ರರೊಂದಿಗೆ ಚರ್ಚಿಸಿ, ಆರ್ಶೀವದಿಸಿ ಮಾತನಾಡಿದರು.
ಅನ್ನದಾತನ ಬದುಕು ಹಸನು ಮಾಡುವಂತ ಅಪ್ಪರ ಭದ್ರ ನೀರಾವರಿ ಯೋಜನೆಯಲ್ಲಿ ಬರುವಂತ ತುಮಕೂರು ಕಾಲುವೆ ಕಾಮಗಾರಿ ಶೀಘ್ರ ಪೊರ್ಣಗೊಳಿಸಿದರೆ, ಭದ್ರೆಯಿಂದ ಬರುವಂತ ನೀರು ಶಿರಾ ತಾಲೂಕಿನ ೪೧.ಕೆರೆಗಳು ತುಂಬಲು ಸಹಕಾರಿಯಾಗಲಿದೆ. ಇಂತಹ ಯೋಜನೆಗಳು ತ್ವರಿತಗತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗ ಬೇಕೆಂದು ಬಿ.ವೈ.ವಿಜಯೇಂದ್ರರವರಿಗೆ ಸಲಹೆ ನೀಡಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಂತ್ರ ರೂಪಿಸಿದ್ದು, ೧೫.ದಿನಗಳಲ್ಲಿ ಅಭ್ಯರ್ಥಿ ಘೋಷಣೆ ವರಿಷ್ಠರು ಮಾಡಲಿದ್ದಾರೆ. ಈ ಭಾರಿ ಶಿರಾ ಜನತೆ ಬದಲಾವಣೆ ಬಯಸಿದ್ದು ಶಿರಾದಲ್ಲಿ ಕಮಲ ಆರಳಿಸುವ ನಿಟ್ಟಿ ಚುನಾವಣೆ ಘೋಷಣೆ ನಂತರ ೧೫.ದಿನ ಕ್ಷೇತ್ರದಲ್ಲಿ ವಾಸ್ತವ್ಯ ಹೊಡಿ ಪ್ರಚಾರ ಮಾಡಲಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos