ಮಂಕಿ ಪಾರ್ಕ್ ಗೆ ಸಿಎಂ ಚಿಂತನೆ

ಮಂಕಿ ಪಾರ್ಕ್ ಗೆ ಸಿಎಂ ಚಿಂತನೆ

ಬೆಂಗಳೂರು, ನ. 5 : ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಗಳನ್ನು ಸಂರಕ್ಷಿಸಲು ಉದ್ಯಾನ (ಮಂಕಿ ಪಾರ್ಕ್) ನಿರ್ಮಿಸುವ ಕುರಿತಂತೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, “ಶಿವಮೊಗ್ಗದಲ್ಲಿ ಮಂಗಗಳಿಂದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಮಲೆನಾಡು ಭಾಗದಲ್ಲಿ ರೈತರು ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಮಂಗಗಳು ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ಬೆಳೆದ ಬೆಳೆ ರೈತರಿಗೆ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಮನೆಗಳಿಗೆ ನುಗ್ಗುವ ಮಂಗಗಳು ಮನೆಗಳ ಹಂಚುಗಳನ್ನು ಒಡೆದು ಹಾಕುತ್ತಿವೆ,” ಎಂಬುದಾಗಿ ಸಮಸ್ಯೆಯನ್ನು ವಿವರಿಸಿದರು.

ಮಂಗಗಳಿಂದ ರೈತರ ಬೆಳೆಗಳನ್ನು ಸಂರಕ್ಷಿಸುವ ಸಲುವಾಗಿ ಶಾಶ್ವತ ಯೋಜನೆ ರೂಪಿಸಬೇಕು. ಮಂಗಗಳ ಪಾರ್ಕ್ ರೂಪಿಸಬೇಕು. ಶರಾವತಿ ಹಿನ್ನೀರಿನಲ್ಲಿ ಇರುವ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸಿ ಅಲ್ಲಿ ಮಂಗಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ನೀಡಿ ಮತ್ತು ಅವುಗಳು ತಿನ್ನುವ ಹಣ್ಣಿನ ಗಿಡಗಳನ್ನು ಬೆಳೆಸಿ ಪಾರ್ಕ್ ನಿರ್ಮಿಸಬಹುದು ಅಂತ ಸಲಹೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos