ನಾನ್ಯಾಕೆ ರಾಜೀನಾಮೆ ನೀಡಲಿ : ಸಿಎಂ

ನಾನ್ಯಾಕೆ ರಾಜೀನಾಮೆ ನೀಡಲಿ : ಸಿಎಂ

ಬೆಂಗಳೂರು, ಜು .11 : ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನಾನ್ಯಾಕೆ ರಾಜೀನಾಮೆ ನೀಡಲಿ. ಅದರ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು. 2009–10ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 8 ಸಚಿವರು ಸೇರಿ 18 ಶಾಸಕರು ರಾಜೀನಾಮೆ ನೀಡಿದ್ದರು. ಆಗ ಏನಾಗಿತ್ತು?. ಅವರು ರಾಜೀನಾಮೆ ನೀಡಿದ್ದರಾ?’ ಎಂದರು. ನಾನು ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಎಚ್ ಡಿಕೆ ರಿಸೈನ್ : ಇತ್ತ ಡಿ. ಕೆ ಶಿವಕುಮಾರ್ ಮುಂಬೈನಿಂದ ಬುಧವಾರ ಮಧ್ಯರಾತ್ರಿ ಬಂದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಲ್ಲಿನ ಸರ್ಕಾರ ನಡೆದುಕೊಂಡ ರೀತಿ ಅಮಾನವೀಯ. ಅಧಿಕೃತ ಪ್ರವಾಸ ಹೋಗಿದ್ದೇನೆ. ಅದನ್ನು ಅಲ್ಲಿನ ಸರ್ಕಾರಕ್ಕೂ ತಿಳಿಸಿದ್ದೆ. ಹೀಗಿದ್ದೂ ಅವರು ನನಗೆ ಹೋಟೆಲ್ ಪ್ರವೇಶಿಸದಂತೆ ತಡೆದರು. ಈ ಬಗ್ಗೆ ನಾನು ಹೋಟೆಲ್ ವಿರುದ್ಧ ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ’ ಕುಮಾರಸ್ವಾಮಿ ಯಾಕೆ ರಿಸೈನ್ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos