ಸರ್ಕಾರ ಉಳಿಸಿಕೊಳ್ಳೋಕೆ ಮಾಸ್ಟರ್ ಪ್ಲಾನ್‍..!

ಸರ್ಕಾರ ಉಳಿಸಿಕೊಳ್ಳೋಕೆ ಮಾಸ್ಟರ್ ಪ್ಲಾನ್‍..!

ಬೆಂಗಳೂರು,ಮೇ 13,ನ್ಯೂಸ್‍ ಎಕ್ಸ್ ಪ್ರೆಸ್‍ : ಗೊಂದಲ, ಟೀಕೆ, ಪ್ರತಿಭಟನೆ ನಡುವೆ ಸಿಎಂ ಕುಮಾರಸ್ವಾಮಿ ರೆಸಾರ್ಟ್‍ ವಾಸ್ತವ್ಯ ಮುಗಿಸಿದ್ದಾರೆ. ಸಿಎಂ ಮಡಿಕೇರಿಯ ಇಬ್ಬನಿ ರೆಸಾರ್ಟ್‍ನಲ್ಲಿ ರೆಸ್ಟ್‍ ತೆಗೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಕಾರ್ಯತಂತ್ರ ಹೆಣೆಯುತ್ತಿದ್ದರು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.  ಇವತ್ತು ಸಿಎಂ ಸಕ್ರಿಯವಾಗಿ ಅಖಾಡಕ್ಕೆ ಇಳಿಯೋ ಸಿಎಂ ಕುಮಾರಸ್ವಾಮಿ, ಕುಂದಗೋಳ  ಹಾಗೂ ಚಿಂಚೋಳಿಯ ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ಉಳಿಸಿಕೊಳ್ಳೋದಕ್ಕೆ ಪ್ಲಾನ್ ಮಾಡಿದ್ದಾರೆ. 23 ರ ನಂತ್ರ ಭಾರೀ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂದ ಬಿಜೆಪಿ ಮುಖಂಡರಿಗೆ ಹಾಗೂ ಸಿದ್ದರಾಮಯ್ಯ ಸಿಎಂ ಕೂಗಿಗೆ ಬ್ರೇಕ್‍ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಿಎಂ ಟೀಂ ಯರ್ಯಾರು?

ಸಿಎಂ ಕಟ್ಟಿರೋ ಹೊಸ ಟೀಂನಲ್ಲಿ 6 ಮಂದಿ ಇದ್ದಾರೆ. ಸಿಎಂ ರಚಿಸಿರೋ ಸ್ಪೆಷಲ್‍ ಟೀಂನಲ್ಲಿ ಸಚಿವರಾದ ಪುಟ್ಟರಾಜು, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಶಾಸಕ ಸುರೇಶ್‍ಗೌಡ ಇದ್ದಾರೆ. ವಿಶೇಷವಾಗಿ ಜಿ.ಟಿ.ದೇವೇಗೌಡ, ಹೆಚ್.ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ದೋಸ್ತಿ ನಾಯಕ ಸಿದ್ದರಾಮಯ್ಯರ ತಂತ್ರಗಾರಿಕೆ ಮೇಲೆ ಕಣ್ಣಿಡಲಿದ್ದು, ಸಿದ್ದರಾಮಯ್ಯ ಮತ್ತೆ ಸಿಎಂ ಕೂಗಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಪರೇಷನ್ ಕಮಲ ತಡೆಯೋದು, ದೋಸ್ತಿ ಸರ್ಕಾರದಲ್ಲಿ ಯಾವುದೇ ಗೊಂದಲಗಳು ಉಂಟಾದ್ರೆ ಕೂಡ್ಲೇ ಪರಿಹರಿಸೋದು ಆರು ಮಂದಿಯ ಪ್ರಮುಖ ಕೆಲಸ.

ಸಿಎಂ ಇಬ್ಬನಿ ಟೀಂ ಮೇ 23ರವರೆಗೆ ಫುಲ್ ಆ್ಯಕ್ಟೀವ್ ಆಗಿ ಕೆಲಸ ಮಾಡಲಿದೆ. ರಾಜ್ಯ ರಾಜಕಾರಣದ ಪ್ರತಿಯೊಂದು ಬೆಳವಣಿಗೆಗಳ ಮೇಲೆ ಕಣ್ಣಿಡಲಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಸಿಎಂಗೆ ರವಾನಿಸಲಿದೆ. ಮೇ 23ರ ನಂತರವೂ ಬೇರೆ ಬೇರೆ ಆಪರೇಷನ್‍ಗಳ ಮೇಲೆ ಕಣ್ಣಿಡುವುದು, ವಿಫಲಗೊಳಿಲು ತಂಡ ಕೆಲಸಮಾಡಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos