ಸಿಎಂ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ!

ಸಿಎಂ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ!

ಬೆಂಗಳೂರು, ನ. 08: ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ  ಅನರ್ಹರ ಪ್ರತಿಯೊಂದು ಮಾತಿಗೂ ಮಣೆ ಹಾಕುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಯನ್ನು ವಿರೋಧಿಸಿ ಆಡಳಿತ ಪಕ್ಷದ ಶಾಸಕರು ತಿರುಗಿ ಬೀಳುವ ಹಂತ ತಲುಪಿದೆ.

ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಹಲವಾರ ಬಾರಿ ಮನವಿ ಮಾಡಿಕೊಂಡು ಮನವಿ ಸಲ್ಲಿಸಿದರು ಅನುದಾನ ನೀಡಿಲ್ಲ. ನಾವು ಅನುದಾನ ಕೇಳಿದರೇ ಆಯ್ತು ಮಾಡೋಣ ಬಿಡಿ ಎಂದು ತಾತ್ಸರ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ನೂರಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಬಿಜೆಪಿ ಶಾಸಕರ ಅತೃಪ್ತಿ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದೆ.

ಮುಖ್ಯಮಂತ್ರಿಯವರ ಆಡಳಿತ ಪಕ್ಷದ ಶಾಸಕರು ಯಾವುದೇ ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲಾಗುತ್ತಿಲ್ಲ ಎಂದು ಪಕ್ಷದ ಮುಖಂಡರಲ್ಲಿ ಅಸಮದಾನ ಹೊರಹಾಕಿದ್ದಾರೆ.

ಡಾಲರ್ಸ್ ಕಾಲೋನಿಯ ಮನೆಯನ್ನು‌ ಸರ್ಕಾರಿ ನಿವಾಸಕ್ಕೆ ಮನೆ ಬದಲಾಯಿಸಿದರೆ ಹೇಳಿಕೊಳ್ಳಬಹುದೆಂದು ಕೆಲ ಶಾಸಕರು ಹೇಳಿಕೊಂಡರೆ ಮತ್ತೆ ಕೆಲವರು ನಮ್ಮನ್ನ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಪಕ್ಷದ ಮುಖಂಡರ ಬಳಿ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವದಿಯಲ್ಲಿ  ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಶಾಸಕರ ಸಮಸ್ಯೆಗಳನ್ನು ನಿವಾರಿಸದೆ ಶಾಸಕರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಳ್ಳ ಬೇಕಾಯಿತು.

ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರ ಸ್ವಾಮಿ ಹಾದಿ ಹಿಡಿದಿರುವುದೇ ಆಡಳಿತ ಪಕ್ಷದ ಶಾಸಕರ  ಅತೃಪ್ತಿಗೆ ಕಾರಣವಾಗಿದೆ.

ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ನಮ್ಮ ಮಾತುಗಳನ್ನು ಪರಿಗಣಿಸುತ್ತಿಲ್ಲ. ಹಾಗಾದರೆ ನಮ್ಮನ್ನ ಆಯ್ಕೆ ಮಾಡಿದ ಜನಕ್ಕೆ ನಮ್ಮದೇ ಸರ್ಕಾರ ಇದ್ದರೂ ಯಾವುದೇ ಶಾಶ್ವತ ಕಾಮಗಾರಿ ನೀಡಿಲ್ಲವೆಂದರೆ ಹೇಗೆ ಎಂದು ನಮ್ಮನ್ನಾರಿಸಿದ ಜನರಿಗೆ ಏನು ಉತ್ತರ ಕೊಡುವುದು ಎಂದು ಪಕ್ಷದ ಮುಖಂಡರಲ್ಲಿ ಹೇಳಿಕೊಳ್ಳುವ ಮೂಲಕ ತಮ್ಮ ಅಸಮದಾನ ಹೊರ ಹಾಕಿದ್ದಾರೆ.

ಒಟ್ಟಾರೆ ಈಗ ಆಡಳಿತ ಪಕ್ಷದ ಬಿಜೆಪಿಯ ಶಾಸಕರಲ್ಲೂ‌ ಅಸಮದಾನದ ಹೊಗೆ ಭುಗಿಲೇಳುವಂತಹ ಪರಿಸ್ಥಿತಿಯನ್ನು ಸ್ವತಃ ಯಡಿಯೂರಪ್ಪ ನಿರ್ಮಿಸಿಕೊಳ್ಳುತ್ತಿರುವುದು ಪಕ್ಷದ ವಿರೋಧ ಬಣಕ್ಕೆ ಒಳಗೊಳಗೆ ಸಂತಸ ಮೂಡಿಸುತ್ತಿದೆ ಎನ್ನಲಾಗಿದೆ. ಅಲ್ಲದೆ ಸ್ವ ಪಕ್ಷಿಯ ಶಾಸಕರನ್ನು ಕಡೆಗಣಿಸುತ್ತಿರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಹೇಗಾದರೂ ಮಾಡಿ ನಿಯಂತ್ರಿಸುವ ತಂತ್ರ ರೂಪಿಸಲಾಗುತ್ತಿದೆಯೇ ಎನ್ನುವ ಅನುಮಾನ ಬಿಜೆಪಿ ವಲಯದಲ್ಲಿ ತೀರ್ವ ಚರ್ಚಿತ ವಿಷಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos