ಸಿಎಂ, ಡಿಸಿಎಂ ಆಯ್ತು ಈಗ ಪೊಲೀಸ್‌ ಅಧಿಕಾರಿಗಳು ಗ್ರಾಮ ವಾಸ್ತವ್ಯ

 ಸಿಎಂ, ಡಿಸಿಎಂ ಆಯ್ತು ಈಗ ಪೊಲೀಸ್‌ ಅಧಿಕಾರಿಗಳು ಗ್ರಾಮ ವಾಸ್ತವ್ಯ

ಚನ್ನರಾಯಪಟ್ಟಣ, ಜೂ. 27 : ಇದೀಗ ಪೊಲೀಸ್‌ ಅಧಿಕಾರಿಯೋರ್ವರು ಸದ್ದಿಲ್ಲದೇ ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮದಲ್ಲಿ  ವಾಸ್ತವ್ಯ ಮಾಡಿ ಜನರ ದೂರುಗಳನ್ನು ಆಲಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ ಮಂಜುನಾಥ್‌, ಗ್ರಾಮವಾಸ ಮಾಡಿದ ಪೊಲೀಸ್‌ ಅಧಿಕಾರಿ. ಗ್ರಾಮದ ಲಕ್ಷ್ಮೇನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರೊಂದಿಗೆ ಕುಳಿತು ಮಾತನಾಡಿದರು. ಈ ವೇಳೆ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಗ್ರಾಮಸ್ಥರಿಂದ ದೂರುಗಳನ್ನು ಆಲಿಸಿ, ಅವುಗಳಿಗೆ ಪರಿಹಾರದ ವ್ಯವಸ್ಥೆ ಮಾಡಿದರು. ತಿಂಗಳಲ್ಲಿ ಎರಡು ಬಾರಿ ಗ್ರಾಮಗಳಲ್ಲಿ ಮೊಕ್ಕಾಂ ಹೂಡಿ ಜನರ ಸಮಸ್ಯೆ ತಿಳಿದು ಜನರೊಂದಿಗೆ ಬೆರೆಯಬೇಕು ಎಂಬ ಇಲಾಖೆ ಆದೇಶವನ್ನು ಪಾಲಿಸುವ ಪ್ರಯತ್ನ ಇದಾಗಿದೆ. ಇದನ್ನು ಮುಂದುವರೆಸುತ್ತೇನೆ ಎಂದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ  ಗ್ರಾಮ ವಾಸ್ತವ್ಯ ಮಾಡುವುದಾಗಿ ಘೋಷಿಸಿದ್ದೂ ಆಯ್ತು. ಈಗ ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮಕ್ಕೆ ಮಂಗಳವಾರ ರಾತ್ರಿ 9ರ ವೇಳೆಗೆ ಆಗಮಿಸಿದ ಪಿಎಸ್‌ಐ ಮಂಜುನಾಥ್‌ ಟೀಂ ಗ್ರಾಮ ವಾಸ್ತವ್ಯ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos