ಬೆಂಗಳೂರಿನಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌!

ಬೆಂಗಳೂರಿನಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಟ ಕೇವಲ ಆಟವಾಗಿ ಉಳಿದಿಲ್ಲಾ ನಮ್ಮ ಎಮೋಷನ್‌ ಆಗಿ ಬೆಳೆದ್ದಿದೆ. ಇದೇ ಮೊದಲ ಚೊಚ್ಚಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದ್ದು, ಬೆಂಗಳೂರಿನಲ್ಲಿ ನಾಳೆಯಿಂದ ಕೂಟ ಆರಂಭಗೊಳ್ಳಲಿದೆ. ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್) ಚಾಂಪಿಯನ್ ಅಹಮದಾಬಾದ್ ಡಿಫೆಂಡರ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಚೊಚ್ಚಲ ಪ್ರಶಸ್ತಿಯನ್ನು ತವರಿನಲ್ಲೇ ಗೆಲ್ಲಲು ಎದುರು ನೋಡುತ್ತಿದೆ.

ಕೂಟದಲ್ಲಿ ಭಾರತ, ಬ್ರೆಜಿಲ್, ಇಟಲಿ, ಜಪಾನ್‌ ಹಾಗೂ ಟರ್ಕಿ ದೇಶಗಳ 6 ತಂಡಗಳು ಪಾಲ್ಗೊಳ್ಳಲಿವೆ. ಕೆಲ ದಿನಗಳಿಂದ ಅಹಮದಾಬಾದ್ ತಂಡದ ಆಟಗಾರರು ಬೆಂಗಳೂರಿನಲ್ಲೇ ಅಭ್ಯಾಸ ನಡೆಸುತ್ತಿದ್ದು, ಟ್ರೋಫಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ತಂಡದ ಪ್ರಮುಖ ಆಟಗಾರ, ಮಂಗಳೂರಿನ ಅಶ್ವಲ್ ರೈ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

“ಕ್ಲಬ್ ವಾಲಿಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಪಿವಿಎಲ್ ಬಳಿಕ ದೇಶದ ವಾಲಿಬಾಲ್ ಪ್ರಗತಿಯ ಹಾದಿಯಲ್ಲಿದೆ. ಕ್ಲಬ್ ವಾಲಿಬಾಲ್ ಕೂಟಕ್ಕೂ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ‌. ಬೆಂಗಳೂರಲ್ಲೇ ಕೂಟ ನಡೆಯುತ್ತಿರುವ ಕಾರಣ ಚಾಂಪಿಯನ್‌ ಆಗುವ ನಿರೀಕ್ಷೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos