ಬಟ್ಟೆ ಶೋ ರೂಮ್ ಗೆ ಬೆಂಕಿ; 5 ಸಾವು

ಬಟ್ಟೆ ಶೋ ರೂಮ್ ಗೆ ಬೆಂಕಿ; 5 ಸಾವು

ಪುಣೆ, ಮೇ. 9, ನ್ಯೂಸ್ ಎಕ್ಸ್ ಪ್ರೆಸ್: ಪುಣೆಯ ಉರೂಲಿ ದೇವಾಚಿ ಗ್ರಾಮದಲ್ಲಿ ಬಟ್ಟೆ ಶೋರೂಂನೊಳಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 5 ಜನರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಇಂದು ಮುಂಜಾನೆ ರಾಜ್ ಯೋಗ್ ಸೀರೆ ಮಳಿಗೆಯೊಳಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಹೊತ್ತಿನಲ್ಲಿ ಬೆಂಕಿ ಇತರೆಡೆಗೂ ಹಬ್ಬತೊಡಗಿತ್ತು. ಘಟನಾ ಸ್ಥಳಕ್ಕೆ 5 ಅಗ್ನಿಶಾಮಕ ವಾಹನ ಹಾಗೂ 10 ನೀರಿನ ಟ್ಯಾಂಕರ್ ಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿವೆ ಎಂದು ವರದಿ ಹೇಳಿದೆ.

ಸುಮಾರು 2, 3 ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾಗಿವೆ. ಶೋರೂಂನೊಳಗೆ ಮಲಗಿದ್ದ ಕೆಲಸಗಾರರು ಬೆಂಕಿಗೆ ಸಿಲುಕಿ 5 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos