ಕಲಬುರ್ಗಿಯಲ್ಲಿ ಪೌರತ್ವ ಪಾಲಿಟಿಕ್ಸ್

ಕಲಬುರ್ಗಿಯಲ್ಲಿ ಪೌರತ್ವ ಪಾಲಿಟಿಕ್ಸ್

ಕಲಬುರ್ಗಿ,ಜ. 12 : ಕಲಬುರ್ಗಿಯಲ್ಲಿ ಪೌರತ್ವದ ಪರ ಮತ್ತು ವಿರುದ್ಧದ ಹೋರಾಟಗಳು ತಾರಕಕ್ಕೇರಲಾರಂಭಿಸಿವೆ. ಕರ್ನಾಟಕ ಪೀಪಲ್ಸ್ ಫೋರಂ ನಿಷೇಧಾಜ್ಞೆ ಧಿಕ್ಕರಿಸಿ ಪೌರತ್ವ ವಿರೋಧಿ ಹೋರಾಟ ಮಾಡಿತ್ತು. ಅದಾದ ನಂತರ ಕಲಬುರ್ಗಿ ನಾಗರೀಕ ಸಮಿತಿ ಪೌರತ್ವದ ಪರ ಬೃಹತ್ ಹೋರಾಟ ನಡೆಸಿತು. ಆದರೆ ಈ ಸಂದರ್ಭದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತನ್ನು ಈಶ್ವರ್ ಚಂದ್ರಶಾ(72) ಎಂದು ಗುರುತಿಸಲಾಗಿದೆ.

ಕಲಬುರ್ಗಿ ನಾಗರೀಕ ಸಮಿತಿಯಿಂದ ನಗರೇಶ್ವರ ಶಾಲೆಯಿಂದ ಮೆರವಣಿಗೆಯಲ್ಲಿ ಬರುವಾಗ ಈಶ್ವರ್ ಕುಸಿದು ಬಿದ್ದಿದ್ದ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಶ್ವರ್ ಮೃತಪಟ್ಟಿದ್ದಾನೆ. ಈಶ್ವರ್ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ರಾಲಿಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದ ಈಶ್ವರ್, ಮಾರ್ಗ ಮಧ್ಯದಲ್ಲಿಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಘಟನೆ ಸಂಘಟಕರನ್ನು ಕಸಿವಿಸಿಗೊಳ್ಳುವಂತೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos