ಪೌರತ್ವ ಕಾಯ್ದೆ: ಗಲಭೆಗೆ ಮೊದಲೇ ಪ್ಲ್ಯಾನ್ ಆಗಿತ್ತಾ..?

ಪೌರತ್ವ ಕಾಯ್ದೆ: ಗಲಭೆಗೆ ಮೊದಲೇ ಪ್ಲ್ಯಾನ್ ಆಗಿತ್ತಾ..?

ಮಂಗಳೂರು, ಡಿ. 24: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿ, 19 ರಂದು ತೀವ್ರ ತಿಭಟನೆ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರ ವೇಳೆ ಗೋಲಿಬಾರ್ ನಡೆದಿದ್ದು, ಈ ವೇಳೆ ಇಬ್ಬರು ವ್ಯಕ್ತಿಗಳು ಮೃತರಾಗಿದ್ದರು. ಪೂರ್ವ ನಿಯೋಜಿತವಾಗಿ ಇಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಹೇಳುತ್ತಿವೆ.

ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು ಮೊದಲೇ ಪ್ಲಾನ್ ಮಾಡಿ ಕೊಂಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ನಡುವೆ ಗಲಭೆಕೋರರು ಪ್ರತಿಭಟನೆಗೂ ಮುನ್ನವೇ ಗೂಡ್ಸ್ ಆಟೋದಲ್ಲಿ ಗೋಣಿಚೀಲಗಳಲ್ಲಿ ಕಲ್ಲುಗಳನ್ನು ತರೆಸಿಟ್ಟುಕೊಂಡು ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆಘಾತಕಾರಿ ಅಂಶಗಳು ಹೊರಬಿದಿದ್ದಾವೆ.

ಹೌದು, ಕೆಲ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಬಳಿಕ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದು, ಈ ಎಲ್ಲಾ ಘಟನೆಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದಾವೆ. ಕಲ್ಲು ತೂರಾಟ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿಭಟನಾಕಾರರು ಒಡೆಯಲು ಯತ್ನಿಸಿರುವುದು, ಮನೆಗಳ ಮುಂದಿದ್ದ ಕ್ಯಾಮೆರಾಗಳನ್ನು ತಿರುಗಿಸಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ.

 

ಫ್ರೆಶ್ ನ್ಯೂಸ್

Latest Posts

Featured Videos