ಪೌರತ್ವ ಕಾಯ್ದೆ: ಶಾಂತಿ ನೆಲೆಸಲು ಕಾರಣವಾಯ್ತು ರಾಷ್ಟ್ರಗೀತೆ..!

ಪೌರತ್ವ ಕಾಯ್ದೆ: ಶಾಂತಿ ನೆಲೆಸಲು ಕಾರಣವಾಯ್ತು ರಾಷ್ಟ್ರಗೀತೆ..!

ಬೆಂಗಳೂರು, ಡಿ. 20: ನೆನ್ನೆರಾಜಧಾನಿ ಬೆಂಗಳೂರಲ್ಲೂ ಕೂಡು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯು ಬೇರೆಯದ್ದೆ ಸ್ವರೂಪ ಪಡೆದುಕೊಳ್ಳುವ ಆತಂಕ ಇತ್ತು. ಆದರೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿ ಇದೀಗ, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೌದು, ಪ್ರತಿಭಟನೆಯು ಟೌನ್ ಹಾಲ್ ಬಳಿ ಆರಂಭವಾದಾಗಿನಿಂದ, ಅದು ಸಮಾಪ್ತಿಯಾಗುವುರೆಗೂ ಸ್ಥಳದಲ್ಲೆ ಇದ್ದು ಪ್ರತಿಯೊಂದನ್ನು ಖುದ್ದಾಗಿ ನಿರ್ವಹಿಸಿದ ಚೇತನ್ ಸಿಂಗ್, ಹಲವು ಮುಖಂಡರ ಜೊತೆ ಆಗಾಗ ಮಾತುಕತೆ ನಡೆಸುತ್ತಾನೆ ಇದ್ದರು.

ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಅವರು, ನಮ್ಮ ನಿಮ್ಮಲ್ಲೆ ಕೆಲವರು ಕಿಡಿಗೇಡಿಗಳು ಇರುತ್ತಾರೆ. ಅವರು ಮಾಡುವ ಕೆಟ್ಟ ಕೆಲಸಕ್ಕೆ, ಎಲ್ಲರೂ ಪೆಟ್ಟು ತಿನ್ನಬೇಕಾಗುತ್ತದೆ. ಹಾಗಾಗಿ, ನನ್ನ ಮೇಲೆ ನಂಬಿಕೆ ಇರುವ ದೇಶವಾಸಿಗಳೇ, ನನ್ನೊಂದಿಗೆ ನೀವು ನಿಲ್ಲಿ. ನಾನೊಂದು ಹಾಡು ಹೇಳುತ್ತೇನೆ. ಹಾಡಿಗೆ ಧ್ವನಿಗೂಡಿಸಿ ಎಂದು ಕರೆ ಕೊಡುತ್ತಾರೆ.

ಹೀಗೇ ಅವರು ಹಾಡಿದ ಹಾಡು, ಪ್ರತಿಭಟನಾಕಾರರನ್ನೆಲ್ಲಾ ಎದ್ದು ನಿಲ್ಲಿಸಿ, ಒಕ್ಕೊರಲ ಧ್ವನಿ ಸೇರಿಸುವಂತೆ ಮಾಡಿತು. ಅಲ್ಲಿದ್ದ ಉದ್ವಿಗ್ನತೆಯ ಆತಂಕವನ್ನು ತಿಳಿಸಿಗೊಳಿಸಿದ ಆ ಹಾಡು, ಕಿಡಿಗೇಡಿಗಳ ಕೃತ್ಯದ ಸಂಚನ್ನು ಹುಸಿಗೊಳಿಸಿದ ಆ ಹಾಡು ನಮ್ಮ ರಾಷ್ಟ್ರಗೀತೆ ಅನ್ನೋದು ವಿಶೇಷ.

ಈ ಹಾಡು ಹಾಡಿದ ಬಳಿಕ ಅಲ್ಲಿಂದ ಪ್ರತಿಭಟನಾಕಾರರು ಕೂಡ ತೆರಳಿದರು. ಅಲ್ಲಿವರೆಗೂ ಸ್ಥಳವನ್ನು ಬಿಟ್ಟು ತೆರಳಲು ನಿರಾಕರಿಸ್ತಿದ್ದ ಪ್ರತಿಭಟನಾಕಾರರು, ಚೇತನ್ ಸಿಂಗ್ರ ಮಾತು ಕೇಳಿದ ಬಳಿಕ, ಸ್ಥಳದಿಂದ ತೆರಳಿದರು.

ಫ್ರೆಶ್ ನ್ಯೂಸ್

Latest Posts

Featured Videos