ಪೌರತ್ವ ಕಾಯ್ದೆ, ಮೂಲನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲ: ಬೈರತಿ ಬಸವರಾಜ್ 

ಪೌರತ್ವ ಕಾಯ್ದೆ, ಮೂಲನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲ: ಬೈರತಿ ಬಸವರಾಜ್ 

ಕೆ.ಆರ್.ಪು,ಜ. 07: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮೂಲನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ, ಕಾಯ್ದೆಯ ಬಗ್ಗೆ ಕೇಲವರು ಇಲ್ಲ ಸಲ್ಲದ ಗೊಂದಲ ಸೃಷ್ಟಿ ಮಾಡುತ್ತಿದ್ದು, ಅಂತಹ ಉಹಾ ಪೋಹಗಳಿಗೆ ಕಿವಿಗೊಡಬೇಡಿ ಎಂದು ಸ್ಥಳಿಯ ಶಾಸಕ ಬೈರತಿ ಬಸವರಾಜ್ ಅವರು ತಿಳಿಸಿದರು.

ಕೆ.ಆರ್.ಪುರದ ಬಿಬಿಎಂಪಿ ಬಳಿ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಎಂದು ನಡೆಸಿದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಹಿಂದು, ಜೈನ, ಬುದ್ದ, ಪಾರ್ಸಿ, ಸಿಖ್ ಹಾಗೂ ಕ್ರೈಸ್ತರಿಗೆ ಪೌರತ್ವ ನೀಡುವುದೆ ಈ ಕಾಯ್ದೆಯ ಉದ್ದೇಶ ಎಂದು ತಿಳಿಸಿದರು. ಪೌರತ್ವ ಕಾಯ್ದೆಯಿಂದ ಸ್ಥಳೀಯ ಮೂಲನಿವಾಸಿ ಮುಸ್ಲಿಂರನ್ನು ದೇಶದಿಂದ ಹೊರಾಹಕುತ್ತಾರೆಂದು ಇಲ್ಲ ಸಲ್ಲದ ಆರೋಪದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು, ಕಾಂಗ್ರೆಸ್ ಪಕ್ಷದವರು ಜನರ ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ, ಕಾಯ್ದೆ ಬಳಸಿಕೊಂಡು ರಾಜಕೀಯ ಮಾಡದಂತೆ ಮನವಿ ಮಾಡಿದರು.

ಅನ್ಯದೇಶಗಳಲ್ಲಿ ಕಿರುಕುಳ ಅನುಭವಿಸಿ ಜೀವನ ಮಾಡಲು ನಮ್ಮ ದೇಶಕ್ಕೆ ಬಂದಿರುವ ಹಿಂದು, ಜೈನ, ಬೌದ್ದ ಧರ್ಮ ಸೇರಿದಂತೆ ಐದು ಧರ್ಮಗಳವರಿಗೆ ಪೌರತ್ವ ನೀಡಿ ಜೀವನ ನಡೆಸಲು ಅವಕಾಶ ನೀಡುವುದೇ ಈ ಕಾಯ್ದೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳುವ ಮೂಲಕ  ಕಾಯ್ದೆ ಬಗ್ಗೆ ಕರಪತ್ರ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ  ಚಿದಾನಂದ ಮೂರ್ತಿ, ಪಾಲಿಕೆ ಸದಸ್ಯರಾದ ಎಸ್.ಜಿ.ನಾಗರಾಜ್, ಸುರೇಶ್, ಶ್ರೀಕಾಂತ್, ಜಯಪ್ರಕಾಶ್, ಅಂತೋಣಿ ಸ್ವಾಮಿ, ಮುಖಂಡರಾದ ಎಸ್.ಲೋಕೆಶ್, ಇಟ್ಟಾಚಿ ಮಂಜುನಾಥ್,  ರವಿಕುಮಾರ್,ಕೆ.ಪಿ ಕೃಷ್ಣ ಸೇರಿದಂತೆ ಹಲವಾರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos