ಪೌರಕಾರ್ಮಿಕರ ಸೇವೆ ಶ್ಲಾಘನೀಯ

ಪೌರಕಾರ್ಮಿಕರ ಸೇವೆ ಶ್ಲಾಘನೀಯ

ಕೆಜಿಎಫ್: ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ನೆನಪು ಮತ್ತು ಅವರ ಸೇವೆ ಜನತೆಗೆ ತಿಳಿಯುತ್ತಿದೆ. ಅವರಿಗೆ ಗೌರವ ಸಮರ್ಪಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಅಭಿವೃದ್ದಿ ಕೋಶದ ಯೋಜನಧಿಕಾರಿ ರಂಗಸ್ವಾಮಿ ಹೇಳಿದರು.

ನಗರದಲ್ಲಿಪೌರಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾದರೂ ಕೋವಿಡ್ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದೆ. ಈನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಅಭಿನಂದನಾರ್ಹರು ಎಂದರು.

ಪೌರಾಯುಕ್ತ ಸಿ.ರಾಜು ಮಾತನಾಡಿ, ವರ್ಷ ಪೂರ್ತಿ ದುಡಿಮೆ ಮಾಡಿದ ಕಾರ್ಮಿಕರಿಗೆ ವರ್ಷಕ್ಕೊಮ್ಮೆ ಪ್ರತಿಫಲ ನೀಡುವುದು ನಮ್ಮ ಕರ್ತವ್ಯವಾಗಿದೆ. ಕೋವಿಡ್ ಕಾರಣ ತಡವಾಗಿ ಆಚರಣೆನಡೆಯುತ್ತಿದೆ. ಪೌರಕಾರ್ಮಿಕರಿಗೆ ಉತ್ತಮ ಸೌಲಭ್ಯ ನೀಡುವುದು ಮತ್ತು ಅವರ ಕುಟುಂಬಕ್ಕೆ ಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡುವುದು ನಮ್ಮಲ್ಲೆರ ಕರ್ತವ್ಯವಾಗಿದೆ ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ವ್ಯವಸ್ಥಾಪಕ ಜಯರಾಂ, ಶಶಿಕುಮಾರ್, ಪರಿಸರ ಅಭಿಯಂತರ ರವೀಂದ್ರಕುಮಾರ್, ಸರಸ್ವತಿ ಮೊದಲಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos