ಪೌರಕಾರ್ಮಿಕರ ಪ್ರತಿಭಟನೆ

ಪೌರಕಾರ್ಮಿಕರ ಪ್ರತಿಭಟನೆ

ಹುಬ್ಬಳ್ಳಿ, ಜ. 04:  ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವಲ್ಲಿ ಹುಬ್ಬಳ್ಳಿ-ಧಾರವಡ ಮಹಾನಗರ ಪಾಲಿಕೆ ವಿಳಂಬ ದೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಹುಬ್ಬಳ್ಳಿ-ಧಾರವಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿತು.

ಈ ವೇಳೆ ಪಾಲಿಕೆ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಹೊರ ಗುತ್ತಿಗೆ ಪೌರ ಕಾರ್ಮಿಕರ ನೇತವೇತನ ಪಟ್ಟಿ ಕೂಡಲೇ ಬಿಡುಗಡೆ ಮಾಡಬೇಕು. ನವನಗರದಲ್ಲಿರುವ 124 ನಿವೇಶನಗಳ ಖರೀದಿ ಪತ್ರ ನೋಂದಾಯಿಸಿಕೊಡಬೇಕು. ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ 320 ಮನೆಗಳನ್ನು ತುರ್ತಾಗಿ ಕಟ್ಟಿ ಕೊಡಬೇಕು. ಐಪಿಡಿ ಸಾಲಪ್ಪ ವರದಿ ಪ್ರಕಾರ 500 ಜನಕ್ಕೆ ಒಬ್ಬರು ಕಾರ್ಮಿಕರು ಇರಬೇಕು. 10, 15, 20,25, 30 ವರ್ಷಗಳ ಟೈಬಾಂಡ್ ಆದೇಶ ಆದರೂ ಕೂಡಾ ಇಲ್ಲಿಯವರೆಗೆ ಡಿಪರೇಶನ್, 3 ತುಟ್ಟಿ ಭತ್ಯೆಯನ್ನು ಡಿಪರನ್ಸ ನೀಡಿರುವುದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ನಿವೃತ್ತಿ ಹಾಗೂ ಕುಟುಂಬ ನಿವೃತ್ತಿ ವೇತನ ಪಿಂಚಣಿಯನ್ನು ಕೂಡಲೇ ಮಂಜೂರು ಮಾಡಬೇಕು ಜೊತೆಗೆ ನೇರ ನೇಮಕಾತಿ ಸರ್ಕಾರದ ಆದೇಶ ಇದ್ದಾಗೂ ಕೂಡಾ ವಿಳಂಬ ಮಾಡುತ್ತಿರುವುದನ್ನು ಬಿಡಬೇಕು ಎಂದು ಆಗ್ರಹಿಸಿದರು. ನಂತರ  ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ನಿಂಗಪ್ಪ ಮೊರಬದ, ಗೌರವ ಅಧ್ಯಕ್ಷ ಗಂಗಾಧರ ಟಗರಗುಂಟಿ, ಬಸಪ್ಪ ಮಾದರ, ಉಪಾಧ್ಯಕ್ಷ ಬಿ.ಬಿ.ಕೆಂಪಣ್ಣವರ, ದುರಗಪ್ಪ ವಿರಾಪುರ, ವೆಂಕಟೇಶ ಟಗರಗುಂಟಿ, ಪ್ರಧಾನ ಕಾರ್ಯದರ್ಶಿ ಹೊನ್ನುರಪ್ಪ ದೇವಗಿರಿ, ಹಾಲಪ್ಪ ಯರಮಬಾಳ ಸೇರಿ

ದಂತೆ ನೂರಾರು ಪಾಲಿಕೆ ಪೌರಕಾರ್ಮಿಕರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos