ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಕಲ್ಪಿಸಲು ಸಿಐಟಿಯು ಆಗ್ರಹ

ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಕಲ್ಪಿಸಲು ಸಿಐಟಿಯು ಆಗ್ರಹ

ಸಂಡೂರು: ಅಂಗನವಾಡಿ ಕೇಂದ್ರಗಳು ಶಿಕ್ಷಣದ ಬುನಾದಿ ಕೇಂದ್ರಗಳಾಗಿವೆ ಅವುಗಳಿಗೆ ಬೇಕಾದ ಪೀಠೋಪಕರಣಗಳನ್ನು ತಾಲೂಕು ಪಂಚಾಯಿತಿ ಅನುದಾನದಲ್ಲಿ ನೀಡುವ ಮೂಲಕ ಅಭಿವೃದ್ದಿ ಪಡಿಸಬೇಕು, ಅಲ್ಲದೆ ವಿವಿದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಲೂಕು ಸಿ.ಐ.ಟಿ.ಯು. ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಖಾಜಾಬನ್ನಿ ಬುಧವಾರ ಮನವಿ ಮಾಡಿದರು.

ಪಟ್ಟಣದ ಶಾಸಕರ ಕಛೇರಿಗೆ ತೆರಳಿ ಶಾಸಕ ಈ.ತುಕರಾಂ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಅಂಗನವಾಡಿ ಕೇಂದ್ರಗಳು ಸರ್ಕಾರದ ಹಲವು ಯೋಜನೆಗಳ ಅನುಷ್ಠಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿವೆ, ಅದಕ್ಕೆ ಬೇಕಾದ ಸೌಲಭ್ಯಗಳ ಕೊರತೆ ಇದೆ. ಆದ್ದರಿಂದ ತಾಲೂಕು ಪಂಚಾಯಿತಿ ಅನುದಾನದಲ್ಲಾಗಲಿ, ಸರ್ಕಾರದ ಇತರ ಯೋಜನೆಗಳಿಂದಾಗಲಿ ಪೂರೈಸುವ ಮೂಲಕ ಉತ್ತಮ ಶಿಕ್ಷಣ ನೀಡಿಕೆಗೆ ನಾಂದಿಹಾಡಬೇಕಾಗಿದೆ. ಖಾಸಗಿ ಶಾಲೆಗಳಲ್ಲಿ ಹೈಟೆಕ್ ಆಟಿಕೆ ಸಾಮಾನುಗಳನ್ನು ನೀಡುವ ಮೂಲಕ ಮಕ್ಕಳನ್ನು ಸೆಳೆಯುತ್ತಿದ್ದಾರೆ. ಬಡಮಕ್ಕಳಿಗೆ ಅಂತಹ ಉತ್ತಮ ಶಿಕ್ಷಣ ನೀಡಲು ಬೇಕಾದ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಈ.ತುಕರಾಂ ಅವರು ಮನವಿ ಪತ್ರ ಸ್ವೀಕರಿಸಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು, ಅದಕ್ಕೆ ಬೇಕಾದ ಸೂಕ್ತ ಯೋಜನೆಯನ್ನು ಸಹ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಸಿ.ಐ.ಟಿ.ಯು.ಸಿ.ನ ಅಧ್ಯಕ್ಷ ಜೆ.ಎಂ.ಚನ್ನಬಸಯ್ಯ, ಅಂಗನವಾಡಿ ಸಂಘದ ಮುಖಂಡರಾದ ಬಿ.ಪ್ರತಿಭಾ, ಎ.ಅಂಜಿನಮ್ಮ,ಎಸ್.ಅನಸೂಯಮ್ಮ, ಚಂದ್ರಮ್ಮ,ಗೌರಮ್ಮ, ವಸಂತಮ್ಮ, ಮಹಂತಮ್ಮ, ಹಂಪಮ್ಮ, ಡಿ.ಎಂ.ರೇಣುಕಾ, ಗೌರಮ್ಮ, ಮಮತಾ, ನಾಗಮ್ಮ, ಕನಿವೀರಮ್ಮ, ಹಾಗೂ ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos