ಸಿಲಿಕಾನ್ ಸಿಟಿಯಲ್ಲಿ 23ರಂದು ಮದ್ಯ ನಿಷೇಧ..!

ಸಿಲಿಕಾನ್ ಸಿಟಿಯಲ್ಲಿ 23ರಂದು ಮದ್ಯ ನಿಷೇಧ..!

ಬೆಂಗಳೂರು, ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭೆ ಚುನಾವಣೆಯ ಹಿನ್ನಲೆ ಮೇ. 23 ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ರ ವರೆಗೆ 144 ಸೆಕ್ಷನ್ ಜಾರಿ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ ಎಂದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮೇ. 23 ರಂದು ಪ್ರಕಟವಾಗಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಚುನಾವಣಾ ಬಂದೋಬಸ್ತ್ ಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದೆ.  7 ಡಿಸಿಪಿಗಳು, 22 ಎಸಿಪಿಗಳು, 77 ಇನ್ಸ್ ಪೆಕ್ಟರ್ ಗಳು, 180 ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ 2000 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನೇಮಕ ಮಾಡಲಾಗಿದೆ. ಎರಡು ಪ್ಯಾರಾ ಮಿಲಿಟರಿ ಪಡೆ, 23 ಕೆಎಸ್‌ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos