1.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ

1.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ

ಬೆಂಗಳೂರು: 1.5 ಕೋಟಿ ಮೌಲ್ಯದ ವಿವಿಧ ಬ್ರ್ಯಾಂಡ್ ಗಳ ವಿದೇಶಿ ಸಿಗರೇಟ್ ಗಳನ್ನು ಇಲ್ಲಿನ ಕಸ್ಟಮ್ಸ್  ಅಧಿಕಾರಿಗಳು ವಶಪಡೆಸಿಕೊಂಡಿದ್ದಾರೆ.

ವಿದೇಶಿ ತಯಾರಿಕೆ ಸಿಗರೇಟ್ ಗಳನ್ನು ಹತ್ತಿ ಬಟ್ಟೆ ಎಂದು ಬಾಕ್ಸ್ ಗಳಲ್ಲಿ ತುಂಬಿ ಯಶ್ ವಂತಪುರ ದರಂತೊ ಎಕ್ಸ್ ಪ್ರೆಸ್ ರೈಲಿನಲ್ಲಿ ಹೌರಾದಿಂದ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದ ಗುಪ್ತಚರ ಸುಳಿವು ನೀಡಿದ ಹಿನ್ನಲೆ ಅಧಿಕಾರಿಗಳು ಸಿಗರೇಟ್ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ 58 ರಟ್ಟಿನ ಡೆಬ್ಬುಗಳಲ್ಲಿ 5.86 ಲಕ್ಷ ಸಿಗರೇಟ್ ಗಳು ಪತ್ತೆಯಾಗಿವೆ. ಸಂಗೋಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 15 ಡಬ್ಬುಗಳಲ್ಲಿದ್ದ 5.86 ಲಕ್ಷ ಸಿಗರೇಟ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಕಮಿಷನರ್ ರಮಣರೆಡ್ಡಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos