ಚುಟುಕು ಕ್ರಿಕೆಟ್ ನಲ್ಲಿ ಕೌರ್ ಸಾಧನೆ

ಚುಟುಕು ಕ್ರಿಕೆಟ್ ನಲ್ಲಿ ಕೌರ್ ಸಾಧನೆ

ನವದೆಹಲಿ, ಅ. 5 : ಭಾರತದ ಮಹಿಳಾ ಟಿ-20 ಕ್ರಿಕೆಟ್ ನಲ್ಲಿ ಯಾರು ಮಾಡದ ಸಾಧನೆ ನಾಯಕಿ ಹರ್ಮನ್ಪ್ರೀತ್ ಕೌರ್ ಸಾಧನೆ ಮಾಡಿದ್ದಾರೆ. ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಮಾಡಿರದ ಸಾಧನೆಯನ್ನು ಟಿ-20ಯಲ್ಲಿ ಮಾಡಿದ್ದಾರೆ. 2009 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಹರ್ಮನ್ಪ್ರೀತ್ ಕೌರ್ ಆಗಲೇ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸೂರತ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ಟಿ-20 ಪಂದ್ಯವನ್ನು ಆಡಿದ ಹರ್ಮನ್ಪ್ರೀತ್ ಕೌರ್, ಈ ಮೂಲಕ ಭಾರತ ಪರವಾಗಿ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ ಮೊದಲ ಆಟಗಾರ್ತಿಯಾಗಿದ್ದಾರೆ. ಈವರೆಗೆ ಪುರುಷರ ವಿಭಾಗದಲ್ಲೂ ಕೂಡ ಯಾರು ಈ ಸಾಧನೆ ಮಾಡಿಲ್ಲ.
ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಇಬ್ಬರು ತಲಾ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ ಹರ್ಮನ್ಪ್ರೀತ್ ಕೌರ್ ಅವರು ಇವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
2006 ರಲ್ಲಿ ಚುಟುಕು ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಧೋನಿ 98 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. 2007 ರಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ರೋಹಿತ್ ಕೂಡ 98 ಪಂದ್ಯಗಳನ್ನು ಆಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos