ಸಿನಿತಾರೆಯರಿಗೆ ಮೋದಿ ಕರೆ

ಸಿನಿತಾರೆಯರಿಗೆ ಮೋದಿ ಕರೆ

ಮಾ. 13, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಯು ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ತಾರೆಯರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ”ಈ ಬಾರಿ ಅತೀ ಹೆಚ್ಚು ಮತದಾನ ಆಗಬೇಕು. ಎಲ್ಲರು ತಮ್ಮ ಮತದ ಹಕ್ಕನ್ನು ಚಲಾಯಿಸಬೇಕು. ಇದಕ್ಕೆ ಸಿನಿಮಾ ತಾರೆಯರು ಸಹಕಾರಿಯಾಗಬೇಕು” ಎಂದು ದೇಶದ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಜನಸಾಮಾನ್ಯರಲ್ಲಿ ಕಲಾವಿದರು ಅರಿವು ಮೂಡಿಸುವಂತಹ ಕೆಲಸವನ್ನ ಮಾಡಬೇಕು. ಸೆಲೆಬ್ರಿಟಿಗಳು ಮುಂದೆ ಬಂದು ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕಾದರೆ ಸೆಲೆಬ್ರಿಟಿಗಳ ಪಾತ್ರವು ಇರಬೇಕು ಎಂದು ಪ್ರಧ್ರಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನ, ಭೂಮಿ ಪಡ್ನೆಕರ್ ಸೇರಿದಂತೆ ಎಲ್ಲರೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದ್ದಾರೆ.

ಕೇವಲ ಬಾಲಿವುಡ್ ಸ್ಟಾರ್ ಗಳು ಮಾತ್ರವಲ್ಲ, ಭಾರತದ ಸಿನಿಮಾ ಉದ್ಯಮದ ಎಲ್ಲಾ ರಂಗದ ಕಲಾವಿದರೂ ಈ ಕಾರ್ಯದಲ್ಲಿ ಭಾಗಿಯಾಗಬೇಕಿದೆ. ಸಿನಿಮಾ ನಟ-ನಟಿಯರ ಮಾತಿಗೆ ಗೌರವ ಮತ್ತು ಬೆಲೆ ಕೊಡುವಂತಹ ಅಭಿಮಾನಿಗಳಿದ್ದಾರೆ. ಹಾಗೆ, ಸಿನಿಮಾ ಕಲಾವಿದರಿಂದ ಇಂತಹ ಸಂದೇಶಗಳು ಬಂದಾಗ, ಅದು ಅನೇಕರಿಗೆ ತಲುಪುತ್ತೆ ಎಂಬ ಉದ್ದೇಶ ಮೋದಿ ಅವರದ್ದು.

ಫ್ರೆಶ್ ನ್ಯೂಸ್

Latest Posts

Featured Videos