ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಂಕಾ vs ಇಂಗ್ಲೆಂಡ್ ಮುಖಾಮುಖಿ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಂಕಾ vs ಇಂಗ್ಲೆಂಡ್ ಮುಖಾಮುಖಿ!

ಬೆಂಗಳೂರು: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 25ನೇ ಪಂದ್ಯದಲ್ಲಿ ಲಂಕಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದೆ. ಈ ಪಂದ್ಯ ಅತ್ಯಂತ ರೋಚಕದಿಂದ ಕೂಡಿದೆ ಏಕೆಂದರೆ ಈ ಪಂದ್ಯ ಇವರಿಬ್ಬರಿಗೂ ಬಹಳ ಮುಖ್ಯವಾದ ಪಂದ್ಯವಾಗಿದೆ.

ತಲಾ 3 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಶ್ರೀಲಂಕಾ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಬಹುತೇಕ ಬಾಕಿ ಇರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಉಭಯ ತಂಡಗಳು ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಸ್ಪರ ಎದುರಾಗಲಿದ್ದು, ಸೆಮೀಸ್‌ನತ್ತ ಒಂದು ತಂಡದ ಓಟ ಬಹುತೇಕ ಕೊನೆಗೊಳ್ಳಲಿದೆ.

ಈ ಬಾರಿಯೂ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಪಾಲಿಗೆ ಈ ವಿಶ್ವಕಪ್ ಕರಾಳ ಆರಂಭ ಒದಗಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸೋಲು ತಂಡವನ್ನು ಮತ್ತಷ್ಟು ಕುಗ್ಗಿಸಿದ್ದು ಸುಳ್ಳಲ್ಲ. ತಂಡದಲ್ಲಿ ಬಟ್ಲರ್, ಬ್ರೂಕ್, ಕರ್ರನ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಲಿವಿಂಗ್‌ಸ್ಟೋನ್‌ರಂತಹ ದೊಡ್ಡ ದೊಡ್ಡ ಹೆಸರುಗಳಿದ್ದರೂ ಯಾರಿಂದಲೂ ತಂಡಕ್ಕೆ ಉಪಯುಕ್ತ ಕೊಡುಗೆ ಲಭಿಸುತ್ತಿಲ್ಲ. ತಂಡದ ಪರ ಗರಿಷ್ಠ ವಿಕೆಟ್ ಸರದಾರ ರೀಸ್ ಟಾಪ್ಲಿ ಹೊರಬಿದ್ದಿದ್ದು ತಂಡಕ್ಕೆ ಮತ್ತೊಂದು ಆಘಾತ. ಹೀಗಾಗಿ ಆಲ್ರೌಂಡ್ ಪ್ರದರ್ಶನದ ಹೊರತು ತಂಡದ ಗೆಲುವಿಗೆ ಬೇರೆ ದಾರಿಯಿಲ್ಲ.

ಮತ್ತೊಂದೆಡೆ ಲಂಕಾ ಪರಿಸ್ಥಿತಿ ಕೂಡಾ ಶೋಚನೀಯವಾಗಿದೆ. ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿರುವ  ತಂಡ ಯಾವ ವಿಭಾಗದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಬೌಲರ್‌ಗಳು ದುಬಾರಿಯಾಗುತ್ತಿದ್ದು ತಂಡದ ತಲೆನೋವು ಹೆಚ್ಚಿಸಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಕಳೆದ 4 ವಿಶ್ವಕಪ್ ಪಂದ್ಯದಲ್ಲಿ ಲಂಕಾ ಜಯಗಳಿಸಿದ್ದು, ಗೆಲುವಿನ ಓಟ ಮುಂದುವರಿಸಲು ಕಾಯುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos