ಅರುಣಾಚಲದಲ್ಲಿ ಮತ್ತೆ ಚೀನೀ ಅತಿಕ್ರಮಣ

ಅರುಣಾಚಲದಲ್ಲಿ ಮತ್ತೆ ಚೀನೀ ಅತಿಕ್ರಮಣ

ನವದೆಹಲಿ, ಸೆ. 4 : ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) 100 ಕಿ.ಮೀಯಷ್ಟು ಒಳಗೆ ಚೀನಾ ಸೇನೆ ಅತಿಕ್ರಮಣ ನಡೆಸಿದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ತಾಪಿರ್ ಗಾವೊ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಚೀನಾದ ಸೇನೆ ಅರುಣಾಚಲದ ಅಂಜಾವ್ ಜಿಲ್ಲೆಯ ಚಗಲ್ಗಾಮ್ ಗ್ರಾಮದಲ್ಲಿ ದೊಮಿರು ನಾಲಾಗೆ ಮರದ ಸೇತುವೆಯೊಂದನ್ನು ನಿರ್ಮಿಸಿದೆ. ಬಿಜೆಪಿ ಕಾರ್ಯಕರ್ತನೊಬ್ಬ ಸೇತುವೆಯ ದೃಶ್ಯಾವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ಅರುಣಾಚಲ ಪೂರ್ವದ ಸಂಸದ ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಅಕ್ರಮವಾಗಿ ಒಳನುಸುಳುವಂತಹ ನಡೆಸಬಹುದಾದ ಹಲವು ಸ್ಥಳಗಳಿವೆ ಎಂದು ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos