ಚೀನಾದಲ್ಲಿ ಬಿಡುಗಡೆಯಾಗಲಿದೆ ಶ್ರೀದೇವಿಯ ಕೊನೆಯ ಚಿತ್ರ

ಚೀನಾದಲ್ಲಿ ಬಿಡುಗಡೆಯಾಗಲಿದೆ ಶ್ರೀದೇವಿಯ ಕೊನೆಯ ಚಿತ್ರ

ಮುಂಬೈ, . 5, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನ ಸೂಪರ್ ಸ್ಟಾರ್ ಶ್ರೀದೇವಿ ಅಭಿನಯದ ಕೊನೆಯ ಚಿತ್ರ ‘ಮಾಮ್’ ಇದೀಗ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಚೀನಾದಲ್ಲಿ ತಾಯಂದಿರ ದಿನದ ವಿಶೇಷವಾಗಿ ಮೇ 10 ರಂದು ಮಾಮ್ ಚಿತ್ರ ಬಿಡುಗೊಡೆಗೊಳ್ಳಲಿದ್ದು ಪ್ರಸ್ತುತ ಚಿತ್ರವನ್ನು ಎಲ್ಲಾ ತಾಯಂದಿಯರಿಗೆ ಅರ್ಪಣೆ ಮಾಡಲಾಗುತ್ತಿದೆ.

‘ಮಾಮ್’ ಚಿತ್ರವನ್ನು ಝೀ ಸ್ಟುಡಿಯೋ ರಿಲೀಸ್ ಮಾಡುತ್ತಿದ್ದು ಚೀನಾ ಭಾಷೆಯ ಚಿತ್ರದ ಪೋಸ್ಟರ್ ಕೂಡಾ ಈಗಾಗಲೇ ಹೊರಬಂದಿದೆ. ಕ್ರೈಮ್ ಥ್ರಿಲ್ಲರ್ ಚಿತ್ರವಾಗಿರುವ ಮಾಮ್ ಭಾರತದಲ್ಲಿ ಕಳೆದ ಜುಲೈ 7 ರಂದು 4 ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಭಾರತದ ನಂತರ ಚೀನಾ ಪ್ರೇಕ್ಷಕರ ಮುಂದೆ ಮಾಮ್ ಚಿತ್ರ ಬಿಡುಗಡೆಯಾಗಲಿದ್ದು ಬಾಲಿವುಡ್ ಬೆಡಗಿ, ಸೂಪರ್ ಸ್ಟಾರ್ ಶ್ರೀದೇವಿ ಅಭಿನಯದ 300 ನೇ ಚಿತ್ರ ಇದಾಗಿತ್ತು. ಆದರೆ ಅದುವೇ ಶ್ರೀದೇವಿಯವರ ಕೊನೆಯ ಚಿತ್ರವಾಗಿದ್ದು ಬೇಸರದ ಸಂಗತಿ.

ಫ್ರೆಶ್ ನ್ಯೂಸ್

Latest Posts

Featured Videos