ಚೀನಾದಲ್ಲಿ ಬರಲಿದೆ ಚಾಲಕ ರಹಿತ ರೈಲು! ಗಂಟೆಗೆ 200 ಕಿ.ಮೀ. ವೇಗ

ಚೀನಾದಲ್ಲಿ ಬರಲಿದೆ ಚಾಲಕ ರಹಿತ ರೈಲು! ಗಂಟೆಗೆ 200 ಕಿ.ಮೀ. ವೇಗ

ಚೀನಾ, ಮಾ.4, ನ್ಯೂಸ್ಎಕ್ಸ್ ಪ್ರೆಸ್‍: ಚೀನಾ ದೇಶದ ನೂತನ ಪೀಳಿಗೆಯ ವಿನೂತನ ತಂತ್ರಜ್ಞಾನದ ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಲಿದ್ದು, 2020ರ ಆರಂಭದಲ್ಲೇ ಕಾರ್ಯಾಚರಣೆ ನಡೆಸಲು ಸಜ್ಜಾಗಿವೆ. ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಮೊಟ್ಟ ಮೊದಲ ಮ್ಯಾಗ್ಲೇವ್ ರೈಲು ಇದಾಗಲಿದೆ.

ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳನ್ನು ಸಿಆರ್‌ಆರ್‌ಸಿ ಝುಜೌ ಲೋಕೋಮೋಟಿವ್ ಕಂಪನಿ ಅಭಿವೃದ್ಧಿಪಡಿಸುತ್ತಿದ್ದು, ಚಾಲಕ ರಹಿತ ರೈಲು ಕಾರ್ಯಾಚರಣೆ ಆರಂಭಿಸಿದರೆ ಚೀನಾದಲ್ಲಿ ವಾಣಿಜ್ಯ ಬಳಕೆಯ ಅತಿ ವೇಗದ ರೈಲು ಇದಾಗಲಿದೆ ಎಂದು ಕಂಪನಿ ಅಭಿಪ್ರಾಯಿಸಿದೆ.

ಮ್ಯಾಗ್ಲೆವ್ ರೈಲಿನ ವೇಗ ಹೆಚ್ಚಿಸುವ ಹಾಗೂ ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ಸಂಚರಿಸುವಾಗ ಹೆಚ್ಚು ಶಕ್ತಿಯಿಂದ ಚಲಿಸುವ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಸ್ವಯಂಚಾಲಿತವಾಗಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯನಿರ್ವಹಣೆಗಾಗಿ ಮ್ಯಾಗ್ಲೆವ್ ರೈಲುಗಳಲ್ಲಿ ‘ಶಕ್ತಿಶಾಲಿ ಮೆದುಳು’ ಇರುವಂತ ನೂತನ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಕಂಪನಿಯ ಮುಖ್ಯಸ್ಥ ಝೌ ಕ್ವಿಂಗೆ ತಿಳಿಸಿದ್ದಾರೆ.

ಹೊಸ ರೈಲುಗಳು 50 ರಿಂದ 200 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್-ನಗರೀಯ ಅಥವಾ ನಗರದೊಳಗಿನ ಸಂಚಾರಕ್ಕೆ ಸೂಕ್ತವಾಗುತ್ತವೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos