ಬ್ಯಾಡಗಿ ಮೆಣಸಿನಕಾಯಿ ಬೆಲೆ ಬಂಗಾರ

ಬ್ಯಾಡಗಿ ಮೆಣಸಿನಕಾಯಿ ಬೆಲೆ  ಬಂಗಾರ

ಹಾವೇರಿ,ಜ. 14 : ಒಣ ಮೆಣಸಿನಕಾಯಿಯ ಬೆಲೆ ಬಂಗಾರದಂತೆ ಹೆಚ್ಚಾಗುತ್ತಿದ್ದು, ಮೆಣಸಿನಕಾಯಿ ಬೆಳೆದ ರೈತರಿಗೆ ಬಂಪರ್. ಜಿಲ್ಲೆಯ ಬ್ಯಾಡಗಿ ವಿಶ್ವಪ್ರಸಿದ್ಧ ಇದೀಗ ಮೆಣಸಿಕಾಯಿ ಬೆಳೆದ ರೈತರಿಗೆ ಹರ್ಷವಾಗಿದೆ. ಇನ್ನು, ಒಂದು ಕ್ವಿಂಟಾಲ್ ಮೆಣಸಿನಕಾಯಿಗೆ ಖರೀದಿಗೆ ಬರೋಬ್ಬರಿ 33,333 ರೂ ಬೆಲೆ ಸಿಕ್ಕಿದೆ. ಬ್ಯಾಡಗಿ ಮಾರುಕಟ್ಟೆಗೆ ಮಾರಾಟ ಮಾಡಲು ಬಂದಿದ್ದ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ರೈತ ಮಂಜುನಾಥ ಗಾಡರೆಡ್ಢಿ ಬೆಳೆದ ರೈತನಿಗೆ ಸಿಕ್ಕ ಅತಿ ಹೆಚ್ಚು ಬೆಲೆ ಸಿಕ್ಕಿದೆ. ಮಾರುಕಟ್ಟೆಯ ಕಲಕಟ್ಟಿ ಏಜೆನ್ಸಿ ದಲಾಲಿ ಅಂಗಡಿಯಲ್ಲಿ ಟೆಂಡರಗಿಟ್ಟಿದ್ದ ಮೆಣಸಿನಕಾಯಿಯನ್ನು ದಾಖಲೆ ಬೆಲೆ ನೀಡಿ ವರ್ತಕರು ಖರೀದಿ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos