ಸೇನಾ ವಿಮಾನ ನಾಪತ್ತೆ..!

ಸೇನಾ ವಿಮಾನ ನಾಪತ್ತೆ..!

ಸಾಂಟಿಯಾಗೋ, ಡಿ.10 : ಚೀಲಿ ವಾಯು ಪಡೆಗೆ(ಸಿಎಎಫ್) ಸೇರಿ ಮಿಲಿಟರಿ ವಿಮಾನವೊಂದು ನಾಪತ್ತೆಯಾಗಿದೆ. ಕಣ್ಮರೆಯಾದ ವಿಮಾನದಲ್ಲಿ 38 ಮಂದಿ ಇದ್ದರು. ಅಂಟಾಕ್ರ್ಟಿಕಾದ ವಾಯು ನೆಲೆಯಿಂದ ಮೇಲೆರಿದ ಕೆಲವು ನಿಮಿಷಗಳಲ್ಲೇ ಈ ವಿಮಾನ ನಾಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಚಿಲಿ ವಾಯು ಪಡೆ ತಿಳಿಸಿದೆ. ಎ ಸಿ-130 ಹಕ್ರ್ಯೂಲೆಸ್ ವಿಮಾಣವು ಪುಂಟಾ ಅರೆನಾಸ್ ನಂತರ ಸ್ಥಳೀಯ ಕಾಲಮಾನ 19.55ರಲ್ಲಿ ಮೇಲೇರಿತು.

ಇದು ಪ್ರೆಸಿಡೆಂಟ್ ಎಡುರಾರ್ಡೋ ಫ್ರೀ ಅಂಟಾಕ್ರ್ಟಿಕ್ ನೆಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಣ್ಮರೆಯಾಗಿದೆ. ಸೇನಾ ವಿಮಾನದಲ್ಲಿ ಚಾಲನಾ ಸಿಬ್ಬಂದಿ ಸೇರಿದಂತೆ 38 ಮಂದಿ ಇದ್ದರು. ಎಂದು ವಾಯುಪಡೆ ತಿಳಿಸಿದೆ. ನಾಪತ್ತೆಯಾದ ವಿಮಾನಕ್ಕಾಗಿ ತೀವ್ರ ಶೋಧ ಕಾರ್ಯರಣೆ ಮುಂದುವರಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos