ಈ ಜಿಲ್ಲೆಯಲ್ಲಿ ಮಕ್ಕಳು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಭೇಟಿ ಮಾಡುತ್ತಾರೆ

ಈ ಜಿಲ್ಲೆಯಲ್ಲಿ ಮಕ್ಕಳು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಭೇಟಿ ಮಾಡುತ್ತಾರೆ

ಬಾಗಲಕೋಟೆ, ಡಿ. 21: ಪೊಲೀಸ್ ಅಥವಾ ಪೊಲೀಸ್ ಠಾಣೆ ಎಂದರೆ ಮಕ್ಕಳಿಗೆ ಭಯ ಇದ್ದೇ ಇರುತ್ತದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಗುರುವಾರ ಬಂತಂದ್ರೆ ಸಾಕು ಪೊಲೀಸ್ ಠಾಣೆಗೆ ಮಕ್ಕಳು ಹೋಗುತ್ತಾರೆ. ಜಿಲ್ಲೆಯಲ್ಲಿ 27 ಪೊಲೀಸ್ ಠಾಣೆಗಳಿದ್ದು, ಈ ಎಲ್ಲಾ ಠಾಣೆಯಲ್ಲೂ ಆಯಾಯ ಏರಿಯಾ ಮಕ್ಕಳು ಹೋಗುತ್ತಾರೆ.

ಹೌದು, ರಾಜ್ಯದಲ್ಲಿ ತೆರೆದ ಮನೆ ಯೋಜನೆ ಜಾರಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ತೆರೆದ ಮನೆ ಅಂದರೆ ಪೊಲೀಸ್ ಠಾಣೆ. ಪೊಲೀಸರು ಎಂದರೆ ಭಯ, ಕಾನೂನು, ಇವೆಲ್ಲ ಸಾಮಾನ್ಯವಾಗಿರುತ್ತೆ. ಆದರೆ ಶಾಲಾ ಮಕ್ಕಳಿಗೂ ಪೊಲೀಸ್ ಠಾಣೆಯಲ್ಲಿ ದೈನಂದಿನ ಕಾರ್ಯ ಏನೇನು ನಡೆಯುತ್ತೆ. ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ. ಬಾಂಧವ್ಯ ವೃದ್ಧಿ, ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷಿತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆ. ತೆರೆದ ಮನೆ ಕಾರ್ಯಕ್ರಮ ರಾಜ್ಯದಾದ್ಯಂತ ಜಾರಿಯಲ್ಲಿದ್ದು, ತೆರೆದ ಮನೆಯಲ್ಲಿ ಶಾಲಾಮಕ್ಕಳು ಸಹಿತ ಕಾನೂನು ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

 

ಫ್ರೆಶ್ ನ್ಯೂಸ್

Latest Posts

Featured Videos