ಅನಾಥ ಮಕ್ಕಳನ್ನು ಮುಖ್ಯವಾಹಿನಿಗೆ, ಹೈಕೋರ್ಟ್ ಆದೇಶ

ಅನಾಥ ಮಕ್ಕಳನ್ನು ಮುಖ್ಯವಾಹಿನಿಗೆ, ಹೈಕೋರ್ಟ್ ಆದೇಶ

ಬೆಂಗಳೂರು,ಆ. 10: ನಗರ ವ್ಯಾಪ್ತಿಯಲ್ಲಿ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳನ್ನು ಗುರ್ತಿಸಿ ಮುಖ್ಯವಾಹಿನಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ತಿಂಗಳು ಎರಡು ದಿನ ಸಮೀಕ್ಷೆ ನಡೆಯಲಿದ್ದು, ಶಿಕ್ಷಕರೇ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ವಿವಿಧೆಡೆಗಳಿಂದ ವಲಸೆ ಬಂದು ಕೂಲಿ ಕೆಲಸದಲ್ಲಿತೊಡಗಿರುವ ಕಾರ್ಮಿಕರ ಮಕ್ಕಳು, ಫೈಓವರ್ ರೈಲು ನಿಲ್ದಾಣಗಳ ಬಳಿ ಮಲಗುವ ಮಕ್ಕಳು, ಅನಾಥ ಮಕ್ಕಳು ಹಾಗೂ ಬೀದಿ ಬಳಿ ಮಲಗುವ ಅನಾಥ ಮಕ್ಕಳನ್ನು ಸಜೆ 6 ರಿಂದ 11 ರವರೆಗೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆ ಸಮೀಕ್ಷೆಗೆ ಮುಂದಾಗಿದೆ.
ಆಗಷ್ಟ್ 13 ಮತ್ತು 14 ರಂದು ಸಮೀಕ್ಷ ನಡೆಸಲು ನಿರ್ಧರಿಸಿರುವುದಾಗಿ ಶಿಕ್ಷಣ ಇಲಾಖೆ ಆಯುಕ್ತರಾದ ಡಾ.ಕೆ.ಟಿ ಜಗದೀಶ್ ತಿಳಿಸಿದ್ದಾರೆ.
ವಲಸಿಗ ಮಕ್ಕಳು ಅದರಲ್ಲೂ ವಿಶೇಷವಾಗಿ ಅನಾಥ ಬೀದಿ ಮಕ್ಕಳನ್ನು ಪತ್ತೆಹಚ್ಚಲಾಗುತ್ತದೆ.
ಬೆಳಿಗ್ಗೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಸಂಜೆ ಗೊತ್ತುಪಡಿಸಿರುವ ಸ್ಥಳಗಳಲ್ಲಿ ವಾಸ್ತವ ಹೂಡಿ ಪತ್ತೆಹಚ್ಚುವ ಕೆಲಸ ಸಂಜೆ ವೇಳೆ ಕೈಗೆತ್ತಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಮೀಕ್ಷೆಯಲ್ಲಿ ಗುರ್ತಿಸಿದ ಅನಾಥ ಮಕ್ಕಳನ್ನು ಹಾಸ್ಟೆಲ್ ಗಳಿಗೆ ಸೇರಿಸಿ ಊಟ ವಸತಿ, ಸಮವಸ್ತ್ರ ಶಿಕ್ಷಣ ನೀಡಬೇಕಾಗುತ್ತದೆ.
ರಾಜ್ಯದ ಹೊರ ಜಿಲ್ಲೆಗಳಿಂದ ವಲಸೆ ಬಂದು ಕೂಲಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳನ್ನು ಆಯಾ ಜಿಲ್ಲೆಗಳಿಗೆ ವಾಪಸ್ ಕಳಿಸಿ, ಕಡ್ಡಾಯ ಶಿಕ್ಷಣ ಕೊಡಿಸುವಂತೆ ಪೋಷಕರ ಮನವೊಲಿಸಲಾಗುವುದು. ಸಮೀಕ್ಷೆ ಪೂರ್ಣಗೊಂಡ ನಂತರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದೆಂದು ತಿಳಿಸಿದರು.
ರಾತ್ರಿ ಹನ್ನೊಂದು ಗಂಟೆಯವರೆಗೆ ಸಮೀಕ್ಷೆ ಮಾಡಬೇಕಿರುವುದರಿಂದ ಶಿಕ್ಷಕಿಯರಿಗೆ ವಿನಾಯತಿ ನೀಡುವಂತೆ ಕೋರಿ ಶಿಕ್ಷಕರ ಸಂಘ ಸಲ್ಲಿಸಿದ್ದ ಮನವಿಗೆ ವಿನಾಯತಿ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.
ನ್ಯಾಯಾಲಯದ ಆದೇಶದಂತೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಾಗಿ ಶಿಕ್ಷಕರ ಸಂಘದ ಅದ್ಯಕ್ಷ ವಿ.ಎಂ. ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಬಾರದೆಂದು ಶಿಕ್ಷಕಕ ವರ್ಗದಿಂದ ಆಕ್ಷೇಪಣೆ ಬಂದಿದ್ದವು. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಮರ್ಪಕವಾಗಿ ಸಮೀಕ್ಷೆ ಮಾಡದ ಕಾರಣ ಶಿಕ್ಷಕರಿಂದಲೇ ಸಮೀಕ್ಷೆ ಮಾಡಿಸುವಂತೆ ನ್ಯಾಯಲಯ ಸೂಚಿದೆ. ಅನಿವಾರ್ಯವಾಗಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos